ನಮ್ಮ ಪ್ರಜಾಧ್ವನಿ ಯಾತ್ರೆ (Prajadhwani yatre) ನೋಡಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಗೆ ಹಿನ್ನಡೆ ಆಗ್ತಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ (DK.Shivakumar) ಹೇಳಿದ್ದಾರೆ. ಪ್ರಜಾಧ್ವನಿ ಯಾತ್ರೆಗೆ ಸೇರುತ್ತಿರುವ ಜನ ನೋಡಿದರೆ ಅದು ಸಾಬೀತಾಗುತ್ತಿದೆ. ಕಾಂಗ್ರೆಸ್ ನವರು ಕೊಟ್ಟ ಮಾತು ಉಳಿಸಿಕೊಳ್ಳುವ ಕೆಲಸ ಮಾಡ್ತಾ ಬಂದಿದ್ದೇವೆ.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ೫೩೦೦ ಕೋಟಿ ರೂ ಕೊಟ್ಟಿದ್ದಾರೆ. ನಾವು ಕೃಷ್ಣ (Krishna) ಯೋಜನೆಗೆ ೧೫೦೦೦ ಕೋಟಿ ರೂ ಬಂಡವಾಳ ಹಾಕಿದ್ದೇವೆ. ಆ ಯೋಜನೆಗೂ ಸಹ ಹಣ ಕೊಡಬಹುದಿತ್ತಲ್ಲ. ಮೇಕೆದಾಟು ಯೋಜನೆಗೆ ಒಂದು ಸ್ಪಷ್ಟ ತೀರ್ಮಾನ ಮಾಡಬಹುದಿತ್ತಲ್ವಾ ಎಂದು ಪ್ರಶ್ನಿಸಿದ್ರು. ಅದಕ್ಕೆ ನಾವೀಗ ಟೆಕ್ನಿಕಲ್ ಟೀಮ್ ಜೊತೆಗೆ ಚರ್ಚೆ ಮಾಡಿದ್ದೇವೆ. ಯಾವ ಕಾರ್ಯಕ್ರಮ ರೂಪಿಸಬೇಕು ಅಂತ ಚರ್ಚೆ ಮಾಡಿಸಿದ್ದೇವೆ. ನಮ್ಮ ಪ್ರಜಾಧ್ವನಿಯಾತ್ರೆ ಬಗ್ಗೆ ಯಡಿಯೂರಪ್ಪ (Yediyurappa) ಅವರು ಮಾತಾಡಲಿ. ಇದನ್ನುಓದಿ :- ಇಂದು ಪ್ರಧಾನಿ ಮೋದಿ ಬೆಂಗಳೂರು ತುಮಕೂರು ಪ್ರವಾಸ
ಪಂಚರ್ ಆಗಿದೆ ಅಂತ ಹೇಳಿದ್ದಕ್ಕೆ ಬೇಸರ ಇಲ್ಲ. ನಮ್ಮ ಟೈರ್ ಪಂಚರ್ ಆಗ್ತದೋ ಅಥವಾ ಅವರ ಟೈರ್ ಪಂಚರ್ ಆಗ್ತದೋ ಜನರು ತೀರ್ಮಾನ ಮಾಡ್ತಾರೆ. ಅಥವಾ ಅವರೇ ಪಂಚರ್ ಆಗ್ತಾರೋ ನೋಡೋಣ. ಎಲ್ಲಾ ಜನರು ತೀರ್ಮಾನ ಮಾಡ್ತಾರೆ ಎಂದು ಡಿಕೆ.ಶಿವಕುಮಾರ್ ತಿಳಿಸಿದ್ದಾರೆ.
ಇದನ್ನುಓದಿ :- ಹಿರಿಯ ಗಾಯಕಿ ವಾಣಿ ಜಯರಾಮ್ ಸಾವಿಗೆ ಕಾರಣ ಬಹಿರಂಗ