ಬೆಂಗಳೂರು : ಲೋಕಸಭಾ ಚುನಾವಣೆಗೆ ರಣತಂತ್ರ ಹೂಡುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕು ಎಂದು ಲೆಕ್ಕಾಚಾರ ಹಾಕುತ್ತಿದೆ. ಈ ಹಿನ್ನಲೆ ಪಕ್ಷದ ನಾಯಕರಿಗೆ ಮಾರ್ಗದರ್ಶನ ಮಾಡಲು ಕೈ ನಾಯಕರು ಮುಂದಾಗಿದ್ದಾರೆ.
2020ರಲ್ಲಿ ಎಲ್ಲರನ್ನೂ ಕಾಡಿದ್ದ ಮಹಾಮಾರಿ ಕೊರೋನ ಆತಂಕ ಇದೀಗಾ ರಾಜ್ಯದಲ್ಲಿ ಮತ್ತೆ ಆರಂಭವಾಗಿದ್ದು, ರಾಜ್ಯದಲ್ಲಿ ಕೊವಿಡ್ ಪ್ರಕರಣಗಳು ಈಗಾಗಲೇ 1200ರ ಗಡಿ ದಾಟಿದ್ದು. ಕೇವಲ ಕೊರೋನಾ ಕಾಟವಷ್ಟೇ ಅಲ್ಲದೆ ಉಪತಳಿ ಜೆಎನ್.1 ಪ್ರಕರಣವು ದಿನೇ ದಿನೇ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ತಲೆನೋವು ಹೆಚ್ಚಿಸುವುದರ ಜೊತೆಗೆ ಆತಂಕಕ್ಕೆ ಕಾರಣವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಕೊವಿಡ್ ಪ್ರಕರಣಗಳು ವರದಿಯಾಗಿದ್ದು, ನ್ಯೂ ಇಯರ್ ಸೆಲೆಬ್ರೆಷನ್‌ನಲ್ಲಿ ಬೆಂಗಳೂರಿನ ಮಂದಿ ಖುಷಿಯಿಂದ ಮೋಜು ಮಸ್ತಿ ಮಾಡುತ್ತಾ ನ್ಯೂ ಇಯರ್‌ನ್ನ ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡಿದ್ರು. ಕೋವಿಡ್ ನಿಯಮಗಳನ್ನು ಗಾಳಿ ತೂರಿ, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳೊದನ್ನ ಮರೆತು ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗಿದ್ದು, ಇನ್ನಷ್ಟೂ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ
ಈಗಾಗಲೇ ರಾಜ್ಯದಲ್ಲಿ ಮಕ್ಕಳನ್ನ ಹೊರತು ಪಡಿಸಿ ಬಹುತೇಕ ಮಂದಿ ಕೋವಿಡ್ ವ್ಯಾಕ್ಸಿನ್ ಅನ್ನು ಪಡೆದುಕೊಂಡಿದ್ದರು. ಕೆಲವೊಂದಿಷ್ಟು ಜನ ಕೊವಿಡ್‌ಗೆ ಮತ್ತೊಮ್ಮೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕೆಂದ್ರ ಸರ್ಕಾರಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಕೋರ್ಬಿವ್ಯಾಕ್ಸ್ ರಾಜ್ಯಕ್ಕೆ ಒದಗಿಸುವಂತೆ ಕೇಳಲಾಗಿತ್ತು.
ಇದೀಗಾ 3000 ಡೋಸ್ ಕೋರ್ಬಿವ್ಯಾಕ್ಸ್ ಲಸಿಕೆಯನ್ನ ಕೇಂದ್ರ ರಾಜ್ಯಕ್ಕೆ ನೀಡಿದ್ದು, ರಾಜ್ಯ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಎಲ್ಲ ಜಿಲ್ಲೆಗಳಿಗೂ ಸಹ ಅಗತ್ಯಕ್ಕಾನುಸಾರವಾಗಿ ಹಂಚಲಾಗಿದೆ. ಇನ್ನು ಕೋರ್ಬಿವ್ಯಾಕ್ಸ್ ಲಸಿಕೆಯನ್ನ 60 ವರ್ಷ ಮೇಲ್ಪಟ್ಟ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ನೀಡಲು ಎಲ್ಲಾ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.
ಒಟ್ನಲ್ಲಿ ಮಹಾಮಾರಿ ಕೊರೋನಾವನ್ನ ತಡೆಗಟ್ಟಲು ಆರೋಗ್ಯ ಇಲಾಖೆ ಹಲವು ಪ್ರಯತ್ನಗಳನ್ನು ಪಡುತ್ತಿದ್ದು, ರಾಜ್ಯದ ಜನತೆ ಈ ಮಹಾಮಾರಿಯಾ ಕಾಟಕ್ಕೆ ತುತ್ತಾಗದೇ ಅದಷ್ಟೂ ಸುರಕ್ಷಿತವಾಗಿರಲಿ ಅನ್ನೋದು ನಮ್ಮ ರಾಜ್ ನ್ಯೂಸ್ ಆಶಯ.
ವರದಿ : ವರ್ಷಿತಾ ತಾಕೇರಿ