ವೀರೇಶ್ ರಾಜ್ ನ್ಯೂಸ್ ಬೆಂಗಳೂರು
ಬೆಂಗಳೂರು: ಆಡಳಿತ ನಡೆಸೋಕೆ ದುಡ್ಡಿಲ್ಲ ದುಡ್ಡಿಲ್ಲ ಅಂತಿರೋ ಬಿಬಿಎಂಪಿ ಖಜಾನೆಗೆ ಮಾರ್ಷಲ್ಸ್ ಕೋಟಿ ಕೋಟಿ ದುಡ್ಡನ್ನು ತುಂಬಿದ್ದಾರೆ. ಮಾರ್ಷಲ್ಸ್ ಗಳಿಂದ ಬಿಬಿಎಂಪಿಗೆ ಈಗ ಬಂಪರ್ ಲಾಟರಿ ಹೊಡೆದಿದ್ದು, ಅಧಿಕಾರಿಗಳು ಫುಲ್ ಖುಷಿ ಆಗಿದ್ದಾರೆ..
ಲಾಕ್ ಡೌನ್ ಎಲ್ಲಾ ತೆರವಾದ ಮೇಲೆ ಜನರು ಸ್ವಲ್ಪ ನಿಟ್ಟಿಸಿರು ಬಿಟ್ಟಿದ್ರು. ಆದರೆ ಅಂತ ಟೈಮ್ನಲ್ಲಿ ಸಿಟಿ ಮಂದಿಗೆ ಶಾಕ್ ಕೊಟ್ಟಿದ್ದು ಮಾರ್ಷಲ್ ಗಳು. ಮಾಸ್ಕ್ ಹಾಕಿಲ್ಲ ಸಾಮಾಜಿಕ ಅಂತರ ಇಲ್ಲ ಅಂತ ಮಾರ್ಷಲ್ ಗಳು ಬೆಂಗಳೂರು ಜನರ ಬೆನ್ನು ಬಿದ್ದಿದರು. ಅಲ್ದೇ ಫೈನ್ ಮೇಲೆ ಫೈನ್ ಹಾಕಿ ಜನರ ಜೀಬಿಗೆ ಕತ್ತರಿ ಹಾಕಿದ್ದರು. ಆದರೆ ಮಾರ್ಷಲ್ ಗಳ ಈ ಕೆಲಸ ಬಿಬಿಎಂಪಿ ಪಾಲಿಗೆ ವರವಾಗಿದೆ. ಮಾಸ್ಕ್ ಹಾಕಿಲ್ಲ, ಸಾಮಾಜಿಕ ಅಂತರ ಇಲ್ಲ ಅಂತ ಜನರ ಬಳಿಯಿಂದ ಮಾರ್ಷಲ್ ಗಳು 7 ಕೋಟಿಗೂ ಅಧಿಕ ಮೊತ್ತ ವಸೂಲಿಮಾಡಿದ್ದಾರೆ.
ಬಿಬಿಎಂಪಿಯ 8 ವ್ಯಾಪ್ತಿಯಲ್ಲಿ ಮಾರ್ಷಲ್ಗ್ಳು 7 ಕೋಟಿ 72 ಲಕ್ಷ ದಂಡ ವಸೂಲಿ ಮಾಡಿ ಪಾಲಿಕೆಗೆ ತಂದುಕೊಟ್ಟಿದ್ದಾರೆ… 2020 ಜೂನ್ ನಿಂದ 2021 ಜನವರಿ ವರೆಗೆ ಒಟ್ಟು 3 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 2 ಲಕ್ಷದ 84 ಸಾವಿರ ಮಾಸ್ಕ್ ಹಾಕದ ಪ್ರಕರಣ ಹಾಗೂ 86 ಸಾವಿರ ಸಾಮಾಜಿಕ ಅಂತರ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಒಟ್ನಲ್ಲಿ ರಸ್ತೆಯಲ್ಲಿ ಓಡಾಡುತ್ತ ಮಾಸ್ಕ್ ಧರಿಸದೆ ಮುಖ ಪ್ರದರ್ಶನ ಮಾಡೋರಿಗೆ ಮಾರ್ಷಲ್ಸ್ ಗಳು ಮಾಸ್ಕ್ ಹಾಕಿಲ್ಲ ಸಾಮಾಜಿಕ ಅಂತರ ಇಲ್ಲ ಅಂತ ಬುದ್ದಿ ಹೇಳಿ ಮಾಸ್ಕ್ ಧರಿಸದವರಿಗೆ ಫೈನ್ ಹಾಕಿ ಕೋಟಿ ಕೋಟಿ ಹಣವನ್ನು ಬಿಬಿಎಂಪಿ ಜೇಬಿಗೆ ಇಳಿಸಿದ್ದಾರೆ. ಇನ್ನೂ ಮಾರ್ಷಲ್ ಗಳು ದಂಡ ಹಾಕುತ್ತಿದ್ದು ಕೆಲವೇ ಕೆಲವು ದಿನಗಳಲ್ಲಿ ದಂಡದ ಮೊತ್ತದ ಸಂಖ್ಯೆ 10 ಕೋಟಿ ದಾಟುವ ನಿರೀಕ್ಷೆ ಇದೆ ಎಂದು ಹೇಳಲಾಗ್ತಿದೆ !ರ