ದೇಶದ ಉನ್ನತ ಹುದ್ದೆಯಲ್ಲೊಂದಾಗಿರುವ ಕೇಂದ್ರೀಯ ತನಿಖಾ ದಳದ ನಿರ್ದೇಶಕರ ಸ್ಥಾನಕ್ಕೆ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ನೇಮಕಗೊಂಡಿದ್ದಾರೆ. ಈ ನೇಮಕ ಸದ್ಯ ರಾಜ್ಯದಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ರಾಜಕೀಯ ವಿಶ್ಲೇಷಕರು ಸೇರಿದಂತೆ ರಾಜಕೀಯ ಬಲ್ಲವರ ಕುತೂಹಲದ ಕಟ್ಟೆ ಒಡೆಯುವಂತೆ ಮಾಡಿದೆ. ಯಾಕಂದ್ರೆ ಇದೇ ಪ್ರವೀಣ್ ಸೂದ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಕ್ರೋಶ ಹೊರಹಾಕಿದ್ದರು. “ಪ್ರವೀಣ್ ಸೂದ್ ನಾಲಾಯಕ್ ಡಿಜಿಪಿ.. ಅವರು ಬಿಜೆಪಿ ಪರವಾಗಿ ಕೆಲಸ ಮಾಡ್ತಿದ್ದಾರೆ.. ಅವರಿಗೆ ನಾವು ಅಧಿಕಾರಕ್ಕೆ ಬಂದಾಗ ಬುದ್ಧಿ ಕಲಿಸ್ತೇವೆ” ಅಂತಾ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದರು..
ಇಲ್ಲಿ ಡಿ.ಕೆ.ಶಿ ಹೇಳಿದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದ್ರೆ ಈಗ ಪ್ರವೀಣ್ ಸೂದ್ ಗೆ ಸಿಬಿಐ ಸಾರಥ್ಯ ನೀಡಲಾಗಿದೆ. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಡಿಕೆಶಿ ಕೆಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇತ್ತ ಪ್ರವೀಣ್ ಸೂದ್ ಅವರು ಕೂಡ ಇನ್ನೂ ಎರಡು ವರ್ಷಗಳ ಕಾಲ ಸಿಬಿಐ ನಿರ್ದೇಶಕರಾಗಿ ಅಧಿಕಾರ ಚಲಾಯಿಸಲಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್ ಹೇಳಿಕೆ.. ಪ್ರವೀಣ್ ಸೂದ್ ಆಯ್ಕೆ.. ಮುಂದೆ ಯಾವ ರೀತಿಯ ಘಟನೆ, ಪರಿಣಾಮಗಳಿಗೆ ಸಾಕ್ಷಿ ಆಗಲಿದೆ ಅನ್ನೋದು ಸದ್ಯದ ಕುತೂಹಲವಾಗಿದೆ. ಜೊತೆಗೆ ಡಿ.ಕೆ.ಶಿವಕುಮಾರ್ ಅವರನ್ನ ಪ್ರವೀಣ್ ಸೂದ್ ಟಾರ್ಗೆಟ್ ಮಾಡ್ತಾರಾ ಅನ್ನೋ ಊಹಾಪೋಹ ಕೂಡ ಹುಟ್ಟಿಕೊಂಡಿತ್ತು.
ಇದೀಗ ಈ ಊಹಾಪೋಹಕ್ಕೆ ರೆಕ್ಕೆಪುಕ್ಕ ಬಂದಿದೆ. ” ಡಿ.ಕೆ.ಶಿವಕುಮಾರ್ ಅವರನ್ನ ಟಾರ್ಗೆಟ್ ಮಾಡುವ ಸಲುವಾಗಿಯೇ ದ್ವೇಷ ರಾಜಕಾರಣಕ್ಕಾಗಿ ಕೇಂದ್ರ ಸರ್ಕಾರ ಸಿಬಿಐ ನೂತನ ನಿರ್ದೇಶಕರಾಗಿ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನ ನೇಮಿಸಿದೆ ಅಂತಾ ಕೆ.ಎನ್.ರಾಜಣ್ಣ ಆರೋಪ ಮಾಡಿದ್ದಾರೆ.