ಬೆಂಗಳೂರು : ಇಂದು ಡಿಸಿಎಂ ಡಿ.ಕೆ ಶಿವಕುಮಾರ್(DCM DK Sivakumar) ವಿವಾಹ ವಾರ್ಷಿಕೋತ್ಸವ ಹಿನ್ನೆಲೆ ವಿಶ್ರಾಂತಿಗಾಗಿ ಮೂರು ದಿನಗಳ ಕಾಲ ಕುಟುಂಬ ಸಹಿತ ಮಂಗಳೂರು ಪ್ರವಾಸ (Mangalore tour)ಕೈಗೊಳ್ಳಲಿದ್ದಾರೆ.
ಈಗಾಗಲೇ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಯುರೋಪ್ ರಾಷ್ಟ್ರಕ್ಕೆ ಪ್ರವಾಸ ಬೆನ್ನಲ್ಲೆ ಇದೀಗ ಬಿಎಸ್ವೈ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ತೆರಳಿದ್ದಾರೆ. ಇದೀಗ ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿವಾಹ ವಾರ್ಷಿಕೋತ್ಸವ ಹಿನ್ನೆಲೆ ಮಂಗಳೂರು ಪ್ರವಾಸಕ್ಕೆ ತೆರಳಲು ಸಿದ್ದತೆ ನಡೆಸಿದ್ದಾರೆ. ಇದೀಗ ರಾಜ್ಯದ ರಾಜಕೀಯ ನಾಯಕರು ಪ್ರವಾಸದ ಮೂಡ್ನಲ್ಲಿದ್ದಾರೆ ಎನ್ನೋದರಲ್ಲಿ ತಪ್ಪೇನಿಲ್ಲ.