ಬೆಂಗಳೂರು : ಗಣಿ-ಭೂವಿಜ್ಞಾನ ಇಲಾಖೆ (Department of Mines and Geology) ಉಪ ನಿರ್ದೇಶಕಿ ಡಿಡಿ ಪ್ರತಿಮಾ (Pratima) ಅವರನ್ನುಯಾವ ಕಾರಣಕ್ಕಾಗಿ ಕೊಲೆಯಾಗಿದೆ ತನಿಖೆಯಿಂದ ಬಳಿಕ ಗೊತ್ತಾಗಲಿದೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ಕೆಎ ದಯಾನಂದ್ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಬೆಂಗಳೂರು ಜಿಲ್ಲಾಧಿಕಾರಿ ಕೆಎ ದಯಾನಂದ್ ಮಾತನಾಡಿ, ಕೆಲಸದ ವಿಚಾರದಲ್ಲಿ ಡಿಡಿ ಪ್ರತಿಮಾಗೆ ಯಾವುದೇ ಸಮಸ್ಯೆ ಇರಲಿಲ್ಲ. ಕೆಲಸದ ವಿಚಾರವಾಗಿ ಪ್ರತಿಮಾ ಯಾವುದೇ ಗಂಭೀರ ಆರೋಪ ಮಾಡಿರಲಿಲ್ಲ. ಡಿಡಿ ಪ್ರತಿಮಾ ದಕ್ಷ ಅಧಿಕಾರಿಯಾಗಿದ್ದರು, ನಿರಂತರವಾಗಿ ನನ್ನ ಸಂಪರ್ಕದಲ್ಲಿದ್ದರು. ಉಪ ನಿರ್ದೇಶಕಿ ಪ್ರತಿಮಾ ಪಾಸಿಟಿವ್ ಮೈಂಡ್ ಸೆಟ್ ಹೊಂದಿದ್ದರು. ಎಲ್ಲಾ ಸಭೆಗಳಲ್ಲೂ ಕಡತಗಳ ಜೊತೆಗೆ ಹಾಜರಾಗುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಎಲ್ಲಾ ಅಧಿಕಾರಿಗಳನ್ನು ಕರೆದು ಸ್ವಲ್ಪ ಜೋರು ಮಾಡಿದ್ದೆ. ಅಕ್ರಮವಾಗಿ ಜಲ್ಲಿಕಲ್ಲು, ಕಲ್ಲು ಗಣಿಗಾರಿಕೆ ನಡೆಯುತ್ತಿದೆ, ತಮಿಳುನಾಡಿನಿಂದ ತರುತ್ತಿದ್ದಾರೆ ನೋಡಿ ಅಂದಿದ್ದೆ. ಕೆಲಸದ ಸಂಬಂಧ ಯಾವುದೇ ಸಮಸ್ಯೆ ಇರಲಿಲ್ಲ. ಆ ರೀತಿಯ ಯಾವುದೇ ದೂರು ಬಂದಿಲ್ಲ. ತಮಿಳುನಾಡಿನ ಕಡೆಗೆ ಬರುವ ಲಾರಿಗಳನ್ನು ತಡೆಯೋಕೆ ಹೇಳಿದ್ದೆ. ಯಾವ ಕಾರಣಕ್ಕಾಗಿ ಕೊಲೆಯಾಗಿದೆ ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ