ಬೆಂಗಳೂರು : ಇಂದು (ಜೂನ್ 27) ಕೆಂಪೇಗೌಡ ಜಯಂತಿ (Kempegowda Jayanthi) ಕಾರ್ಯಕ್ರಮದ ವೇದಿಕೆಯಲ್ಲಿ ಬದ್ಧ ವೈರಿಗಳಾದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(Deputy Chief Minister D.K .Shivakumar) ಹಾಗೂ ಅಶ್ವತ್ಥ್ ನಾರಾಯಣ (Ashwath Narayan) ಮುಖಾಮುಖಿಯಾಗಿರುವುದು ಬೆಳಕಿಗೆ ಬಂದಿದೆ
ಕೆಂಪೇಗೌಡ ಜಯಂತಿ ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀಗಳ ಅಕ್ಕಪಕ್ಕವೇ ಕುಳಿತಿದ್ದ ಡಿಕೆಶಿ-ಅಶ್ವತ್ಥ್ ನಾರಾಯಣ ಅವರಿಗೆ ಕಿವಿ ಮಾತು ಹೇಳಿದ್ದು, ರಾಜಕೀಯವಾಗಿ ಬೈದಾಡಿಕೊಳ್ಳದಂತೆ ಸೂಚನೆ ನೀಡಿದ್ದಾರೆ.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಕಿವಿ ಮಾತು ಹಿಂದುರಿದ ಬೆನ್ನಲ್ಲೆ ಅಶ್ವತ್ಥ್ ನಾರಾಯಣ ಮಾಧ್ಯಮಗಳೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ವೈಮನಸ್ಸು ಇಲ್ಲ ಸ್ಪಷನೆ ನೀಡಿದ್ದಾರೆ ಅಲ್ಲದೇ, ಯಾವುದೇ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿಲ್ಲ. ನಾಡಿಗೆ ಒಳಿತು ಮಾಡಬೇಕೆಂದು ರಾಜಕೀಯಕ್ಕೆ ಬಂದಿದ್ದೇವೆ ಎಂದಿದ್ದಾರೆ.
ಯಾವ ಸರ್ಕಾರವೂ ಕೊಡದಷ್ಟು ನಮ್ಮ ಸರ್ಕಾರ ರಾಮನಗರಕ್ಕೆ ಕೊಟ್ಟಿದೆ. ರಾಮನಗರ ನನ್ನ ಪೂರ್ವಿಕರ ಕರ್ಮಭೂಮಿ. ನನ್ನ ಹುಟ್ಟು ಹೆಸರು ಕೆಂಪೇಗೌಡ. ಮುಂದಿನ ದಿನಗಳಲ್ಲಿ ಎಲ್ಲಾ ಇತಿಹಾಸ ಬಹಿರಂಗವಾಗಲಿ, ಅಲ್ಲದೇ ಕಾಂಗ್ರೆಸ್‌ಸರ್ಕಾರ ಕೆಂಪೇಗೌಡರು ಮಾಡಿದ 5% ಅಭಿವೃದ್ಧಿಯನ್ನ ಮಾಡಲಿ ಎನ್ನುವ ಮೂಲಕ ಡಿಕೆಶಿ ವಿರುದ್ಧ ಕಿಡಿ ಕಾರಿದ್ದಾರೆ.