ಬೆಂಗಳೂರು : ಡಿಕೆಶಿ ರಾಜ್ಯದ ಮೋಸ್ಟ್ ಸೆಲ್ಫಿಶ್ ಉಪಮುಖ್ಯಮಂತ್ರಿ ಆಗಿದ್ದಾರೆ ಎನ್ನುವ ಮೂಲಕ ಕನಕಪುರ ಬೆಂಗಳೂರಿಗೆ ಸೇರಿಸುವ ಬಗ್ಗೆ ಡಿಕೆಶಿ ವಿರುದ್ಧ ಪರಿಷತ್ ಸದಸ್ಯ ಎನ್. ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕನಕಪುರ ಬೆಂಗಳೂರಿಗೆ ಸೇರಿಸುವ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಮಾಧ್ಯಮದೊಂದಿಗೆ ಪರಿಷತ್ ಸದಸ್ಯ ಎನ್ ರವಿಕುಮಾರ್ ಮಾತನಾಡಿ, ಡಿಕೆಶಿಗೆ ರಾಮನಗರ ಜಿಲ್ಲೆ ಅಭಿವೃದ್ಧಿ ಆಗೋದು ಇಷ್ಟ ಇಲ್ಲ ಅನಿಸುತ್ತದೆ. ರಾಮನಗರ ಜಿಲ್ಲೆಯನ್ನು ಇನ್ನಷ್ಟು ಕ್ಷೀಣ ಮಾಡುವ ಬಗ್ಗೆ ಡಿಕೆಶಿ ಯೋಚಿಸ್ತಿದ್ದಾರೆ. ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಮೂಲಕ ಇನ್ನಷ್ಟು ಶ್ರೀಮಂತಿಕೆ ಹೆಚ್ಚಿಸಿಕೊಳ್ಳುವ ಉದ್ದೇಶ ಇರಬೇಕು. ಕನಕಪುರದಲ್ಲಿ ಸಾವಿರಾರು ಎಕರೆ ಜಾಗ ಇದೆ. ಇದರಿಂದ ತಾವು ಮತ್ತು ತನ್ನವರು ಅಭಿವೃದ್ಧಿ ಆಗುವ ದೃಷ್ಟಿಯಿಂದ ಈ ಹೇಳಿಕೆ ಕೊಟ್ಟಿರಬೇಕು. ರಾಮನಗರ ಅಥವಾ ಕನಕಪುರ ಉದ್ಧಾರ ಮಾಡಲು ಡಿಕೆಶಿ ಈ ಹೇಳಿಕೆ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿಗೆ ಕನಕಪುರ ಸೇರುವುದರಿಂದ ಜನಕ್ಕೆ ಲಾಭ ಆಗುವುದಕ್ಕಿಂತಲೂ ಡಿಕೆಶಿ ಕುಟುಂಬಕ್ಕೆ ಬಹಳ ದೊಡ್ಡ ಲಾಭ ಆಗಲಿದೆ. ಕನಕಪುರ ಅಭಿವೃದ್ಧಿ ಆಗುವುದಕ್ಕಿಂತಲೂ ಹೆಚ್ಚು ತಾವು, ತಮ್ಮ ಬಂಧು ಬಳಗ ಸಮೃದ್ಧಿ ಆಗುವುದೇ ಅವರ ಉದ್ದೇಶವಾಗಿದೆ. ಕನಕಪುರ ಬೆಂಗಳೂರಿಗೆ ಸೇರಿಸೋದು ಅಭಿವೃದ್ಧಿಯ ಕನಸಲ್ಲ. ಕನಕಪುರ ಅಭಿವೃದ್ಧಿ ಆಗಬೇಕು ಅಂದರೆ ರಾಮನಗರ ಅಭಿವೃದ್ಧಿ ಮಾಡಲಿ. ಕನಕಪುರಕ್ಕೆ ಯಾಕೆ ಡಿಸಿಎಂ ಆಗಿ ಅವರು ಸೀಮಿತ ಆಗ್ತಿದ್ದಾರೆ? ಬರ, ಬಡ ತಾಲ್ಲೂಕುಗಳ ಬಗ್ಗೆ ಯಾಕೆ ಅವರು ಯೋಚಿಸ್ತಿಲ್ಲ? ಡಿಕೆಶಿ ರಾಜ್ಯದ ಮೋಸ್ಟ್ ಸೆಲ್ಫಿಶ್ ಉಪಮುಖ್ಯಮಂತ್ರಿ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.