ವಿಜಯಪುರ : ಯಾವುದೇ ಕಾರಣಕ್ಕೂ DCM ಡಿಕೆ ಶಿವಕುಮಾರ್ ಸಿಎಂ ಆಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರಾಜ್ಯದ ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸಿ ಮುಖ್ಯಮಂತ್ರಿಯಾಗುವ ಹುನ್ನಾರ ನಡೆಸಿದ್ದಾರೆ. ಆದರೆ ಶಿವಕುಮಾರ ಎಂದಿಗೂ ಮುಖ್ಯಮಂತ್ರಿ ಆಗಲ್ಲ ಎಂದರು.
ತಮ್ಮ ಬೆನ್ನಿಗೆ 15 ಶಾಸಕರಿದ್ದರೂ ಹೆಚ್ಚು ಶಾಸಕರ ಬೆಂಬಲ ಇರುವ ಸಿದ್ದರಾಮಯ್ಯ ಅವರನ್ನು ಅಧಿ ಕಾರದಿಂದ ಕೆಳಗಿಳಿಸಲು ಶಿವಕುಮಾರ ಸಂಚು ರೂಪಿಸುತ್ತಿದ್ದಾರೆ. ಬಿಜೆಪಿಗೆ ಹೋದವರು ಮರಳಿ ಬರುತ್ತಾರೆ ಎನ್ನುವ ಹೇಳಿಕೆ ಹಿಂದೆ ಸಿದ್ದರಾಮಯ್ಯ ಶಕ್ತಿ ಕುಗ್ಗಿಸುವ ಹುನ್ನಾರ ಅಡಗಿದೆ. ಬಾಂಬೆ ಬಾಯ್ಸ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬುದೆಲ್ಲ ಊಹಾಪೋಹ ಹಾಗೂ ಕಾಂಗ್ರೆಸ್ ನಡೆಸಿರುವ ಅಪಪ್ರಚಾರ.
ಶಾಸಕ ಮುನಿರತ್ನ ಬಿಜೆಪಿಯಲ್ಲೇ ನನ್ನ ರಾಜಕೀಯ ಜೀವನ ಕೊನೆಗೊಳ್ಳಲಿದೆ ಎಂದಿದ್ದಾರೆ. ಇಂಥ ಅಪಪ್ರಚಾರದಿಂದ ಭಯ ಹುಟ್ಟಿಸಿ, ಲೋಕಸಭಾ ಚುನಾವಣೆಗೆ ವಾತಾವರಣ ವಾಮ ಮಾರ್ಗದ ಸಿದ್ಧತೆ ನಡೆಸಿದ್ದಾರೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಬಿಜೆಪಿ ಮುಖಂಡ ಎಸ್.ಟಿ.ಸೋಮಶೇಖರ ಭೇಟಿ ಮಾಡಿದ್ದರಲ್ಲಿ ತಪ್ಪೇನಿಲ್ಲ. ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಶಾಸಕನಾಗಿದ್ದ ನಾನು ಪಟೇಲರು ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದಿದ್ದೆ. ಅ ಧಿಕಾರದಲ್ಲಿರುವ ನಾಯಕರನ್ನು ವಿಪಕ್ಷದವರು ಭೇಟಿ ಮಾಡುವುದು ಸಾಮಾನ್ಯ. ರಾಜಕೀಯದ ಹೊರತಾಗಿ ಭೇಟಿ ಮಾಡಿದರೆ ತಪ್ಪೇನಿಲ್ಲ ಎಂದು ಹೇಳಿದ್ದಾರೆ..