ಬೆಂಗಳೂರು : ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆಯುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಹೇಳಿಕೆ ನೀಡಿದಕ್ಕೆ ಸಂಸದ ಡಿ.ಕೆ ಸುರೇಶ್ (DK Suresh) ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಸಂಸದ ಡಿ.ಕೆ ಸುರೇಶ್ ಮಾತನಾಡಿ, ಹಿಜಾಬ್ ಮೊದಲಿಂದಲೂ ನಡೆದುಕೊಂಡು ಬಂದಿರೋದು. ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ವಿಚಾರಣೆ ಮಾಡಿಕೊಂಡು ಬರ್ತಿದೆ.
ಹಿಜಾಬ್ ನಿಷೇಧ ವಿಚಾರವೊಂದು ವಿಚಾರಣೆ ಹಂತದಲ್ಲಿದೆ. ಆದ್ರೂ ಅವರ ಅಗತ್ಯತೆ. ಅವರವರ ಉಡುಪು ರಕ್ಷಣೆ ಮಾಡಿಕೊಳ್ಳೋದು ಅವರ ಹಕ್ಕು. ಮುಖ್ಯಮಂತ್ರಿಗಳು ಅವರ ಹಕ್ಕಿನ ಬಗ್ಗೆ ಸ್ಪಂದಿಸ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.