ಬೆಂಗಳೂರು : ಕಾವೇರಿ ಒಂದೆಡೆ ತಮಿಳುನಾಡಿಗೆ ಹರಿದರೆ ಮತ್ತೊಂದೆಡೆ ಸೋರಿಕೆಯಲ್ಲಿ ಮಾಯವಾಗುತ್ತಿದ್ದಾಳೆ ಇದರಿಂದ ಜಲಮಂಡಳಿ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ ಆಗ್ತಿದೆ ಮಹಾನಗರದ ಜನತೆಯ ದಾಹ ತಣಿಸಲು ಜಲಮಂಡಳಿ ಪರದಾಡುವಂತಾಗಿದೆ. ಉದ್ಯಾನನಗರಿಗರ ದಾಹ ತಣಿಸಲು ನೀರು ಪೂರೈಸುವ ಸವಾಲಿಗಿಂತ, ಪೂರೈಕೆಯಲ್ಲಿನ ಸೋರಿಕೆ ತಡೆಯೇ ಜಲಮಂಡಳಿಗೆ ಸವಾಲಾಗಿ ಪರಿಣಮಿಸಿದೆ.ಹೀಗಾಗಿ ಅಕ್ರಮ ನೀರಿನ ಸಂಪರ್ಕಗಳಿಗೆ ಬ್ರೇಕ್ ಹಾಕಲು ಜಲಮಂಡಳಿ ಮುಂದಾಗಿದೆ.
ಕಾವೇರಿ ನೀರು ಸೋರಿಕೆ ತಡೆಯುವದಲ್ಲಿ ಬೆಂಗಳೂರು ಜಲಮಂಡಳಿ ವಿಫಲವಾಗಿದೆ.ಒಂದೂವರೆ ಕೋಟಿ ಜನಸಂಖ್ಯೆ ದಾಟ್ಟಿರುವ ಮಹಾನಗರದ ಜನತೆಗೆ ಪ್ರತಿ ನಿತ್ಯ 1450 ಎಂಎಲ್‌ಡಿಯಷ್ಟು ಪ್ರಮಾಣದ ನೀರನ್ನ ಕಾವೇರಿನಿಂದ ಸರಬರಾಜು ಮಾಡಲಾಗುತ್ತಿದೆ. ನಗರದಿಂದ 100 ಕಿಲೋ ಮೀಟರ್ ದೂರದಲ್ಲಿರೋ ಕಾವೇರಿ ನದಿಯಿಂದ ನೀರನ್ನು ತರಲಾಗುತ್ತಿದೆ. ಆದರೆ ಇಷ್ಟು ದೂರದಿಂದ ನೀರು ತರುವಲ್ಲಿ ಅರ್ಧದಷ್ಟು ನೀರು ಸೋರಿಕೆಯಲ್ಲೇ ಮಾಯವಾಗುತ್ತಿದೆ. ಹೀಗಾಗಿ ನೀರು ಸೋರಿಕೆ ಜಲಮಂಡಳಿಗೆ ತಲೆನೋವಾಗಿದೆ. ಸದ್ಯ ಕೆಆರ್‌ಎಸ್ ಜಲಾಶಯದಲ್ಲಿ 20 ಟಿಎಂಸಿ ನೀರು ಲಭ್ಯ ಇದ್ದು,ಮುಂದಿನ ಬೇಸಿಯವರಿಗೆ ನೀರು ಬೇಕಾಗಿರೋ ಕಾರಣ ನೀರು ಸಂಗ್ರಹಕ್ಕೆ ಜಲಮಂಡಳಿ ಮುಂದಾಗಿದೆ.
ಸಿಲಿಕಾನ್ ಸಿಟಿ ಮಂದಿಗೆ ನೂರಾರು, ಸಾವಿರಾರು ರೂಪಾಯಿ ಬಿಲ್ ಹಾಕಿ ವಸೂಲಿ ಮಾಡುವ ಜಲಮಂಡಳಿ,ಆರ್ಥಿಕ ನಷ್ಟ ಅಂತಿದೆ. ಆದ್ರೆ ಅಲ್ಲಿನ ಕೆಲ ಭ್ರಷ್ಟ ಅಧಿಕಾರಿಗಳು ಸೇರಿಕೊಂಡು ಮಾಡ್ತಿರುವ ಕೋಟ್ಯಾಂತರ ರೂಪಾಯಿ ಗೋಲ್‌ಮಾಲ್ ಯಾರಿಗೂ ಗೊತ್ತೇ ಆಗ್ತಿಲ್ಲವಂತೆ. ಕಾವೇರಿ ಹೆಸರಿನಲ್ಲಿ ಸಿಕ್ಕಪಟ್ಟೆ ವಂಚನೆ ನೀಡ್ತಿರೋ ಆರೋಪ ಸಹ ಇದೆ. ಜೊತೆಗೆ ಜನ ಸಿಕ್ಕಾಪಟ್ಟೆ ನೀರುನ್ನ ಕಳ್ಳತನ ಮಾಡ್ತಿದ್ದಾರೆ. ಕಾವೇರಿ ನೀರು ಸಂಪರ್ಕ ವನ್ನ ಪಡೆಯಲು ಲೀಗಲ್ ಆಗಿ ಜಲ ಮಂಡಳಿಯಿಂದ ಅನುಮತಿ ಪಡೆದು ಸಂಪರ್ಕ ಕಲ್ಪಿಸಿಕೊಳ್ಳಬೇಕು. ಆದರೆ BWSSB ಕೊಟ್ಟ ಯಾವುದೋ ನೀರಿನ ಸಂಪರ್ಕಕ್ಕೆ ಬೈಪಾಸ್ ಮಾಡಿಕೊಂಡು ನೀರಿಗೆ ಕನ್ನ ಹಾಕಿರುವ ಘಟನೆಗಳು ಇದೀಗ ಬೆಳಕಿಗೆ ಬರುತ್ತಿವೆ. ಅಂಥವರ ವಿರುದ್ಧ ಜಲ ಮಂಡಳಿ ಇದೀಗ ದಂಡಾಸ್ತ್ರ ಪ್ರಯೋಗ ಮಾಡೋಕೆ ಮುಂದಾಗಿದೆ.
ಮಹಾನಗರ ಬೆಂಗಳೂರಿಗೆ ನೀರಿನ ಸಮಸ್ಯೆ ಇಲ್ಲ ಎನ್ನುವ ಹಾಗಿಲ್ಲ. ಕಾವೇರಿ ಇಲ್ಲದಿದ್ದರೆ ಬೆಂಗಳೂರಿಲ್ಲ. ಇದರ ನಡುವೆ ಬೆಂಗಳೂರಿನಲ್ಲಿ ನೀರಿಗೆ ಕನ್ನಾ ಹಾಕುವವರು ಇದ್ದಾರೆ ಎಂದರೆ ನಂಬಲೇ ಬೇಕು.ನಗರದ ಪಶ್ವಿಮ ಪೂರ್ವ ವಲಯದಲ್ಲಿ ಅತಿ ಹೆಚ್ಚು ಅನಧಿಕೃತ ಸಂಪರ್ಕಗಳು ಇವೆ. ಹೀಗಾಗಿ ಸಿಎಂ ಕೂಡ ನಗರದಲ್ಲಿ ಅನಧಿಕೃತ ಸಂಪರ್ಕಗಳ ಪತ್ತೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ನಗದೆಲ್ಲಡೆ ಅನಧಿಕೃತ ಸಂಪರ್ಕ ಪಡೆದಿರೋ ಕಳ್ಳರ ಬೇಟೆಗೆ ಅಧಿಕಾರಿಗಳು ರೆಡಿಯಾಗಿದ್ದಾರೆ. ಮಂಡಳಿಯು 10.34 ಲಕ್ಷ ಸಂಪರ್ಕಗಳನ್ನು ಹೊಂದಿದ್ದು,ಸಾವಿರಾರು ಮಂದಿ ಅಕ್ರಮವಾಗಿ ನೀರು ಕುಡಿದು ಮಂಡಳಿ ಬೊಕ್ಕಸಕ್ಕೆ ನಷ್ಟ ಮಾಡ್ತಿದ್ದಾರೆ. ಹೀಗಾಗಿ ಅನಧಿಕೃತವಾಗಿ ಯಾರೆಲ್ಲಾ ನೀರಿನ ಸಂಪರ್ಕ ಹೊಂದಿದ್ದಾರೋ ಅವರಿಗೆಲ್ಲಾ ಜಲ ಮಂಡಳಿ ಭಾರೀ ದಂಡ ವಿಧಿಸಲಿದೆ. ನೀರು ಕಳ್ಳತನ ಅಪರಾಧವಾಗಿದ್ದು, ಈ ಬಗ್ಗೆ ಪೊಲೀಸರಿಗೆ ಜಲ ಮಂಡಳಿ ಮಾಹಿತಿ ರವಾಹನಿಸಲಿದೆ. ಅಲ್ದೇ ಈಗ ಅನಧಿಕೃತವಾಗಿ ನೀರಿನ ಕನೆಕ್ಷನ್ ಪಡೆದುಕೊಂಡಿರುವವರಿಗೆ BWSSB ಐದು ಸಾವಿರದಿಂದ ಹತ್ತು ಸಾವಿರದ ವರೆಗೆ ದಂಡ ವಿಧಿಸಲಿದೆ. 2013 ರಲ್ಲಿ ಶೇ .49 ರಷ್ಟಿದ್ದ ನೀರು ಪೋಲಾಗುವಿಕೆ ಇದೀಗ ಶೇ .36 ಕ್ಕೆ ಇಳಿದಿದೆ. ಇತ್ತೀಚಿನ ಪರಿಶೀಲನಾ ಸಭೆಯಲ್ಲಿ, ಸಿಎಂ ಕೂಡ ಶೇಕಡ 20 ಕ್ಕೆ ಕಡಿತಗೊಳಿಸುವಂತೆ ಬಿಡಬ್ಲ್ಯೂಎಸ್‌ಎಸ್‌ಬಿಗೆ ಸೂಚನೆ ನೀಡಿದ್ದಾರೆ.ಕಾನೂನುಬಾಹಿರ ವಿಧಾನಗಳನ್ನು ಪಾಲಿಸಿ ನೀರು ಕುಡಿಯುತ್ತಿರುವರಿಗೆ ಭಾರಿ ದಂಡ ವಿಧಿಸುತ್ತದೆ.