ಬೆಂಗಳೂರು : ಸಿಎಂ ಸಿದ್ದರಾಮಯ್ಯ ಇವತ್ತು 14 ನೆ ಬಜೆಟ್ ಮಂಡಿಸಿ ದಾಖಲೆ ಮಾಡಿದ್ರು.. ಸಾಕಷ್ಟು ಭರವಸೆಗಳ ಜೊತೆ ಗ್ಯಾರಂಟಿ ಯೋಜನೆಯ ಜಾರಿಗೆ ತರುವ ಸಾವಲು ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು.. ಈ ಸವಾಲಿಗೆಲ್ಲಾ ಇವತ್ತು ಬಜೆಟ್ ಮಂಡಿಸುವ ಮೂಲಕ ಅದನ್ನ ಸಾಧಿಸಿದ್ದೇವೆ ಎಂಬ ವಿಶ್ವಾಸದಲ್ಲಿದ್ದಾರೆ. ಈ ಬಜೆಟ್ ಮಂಡನೆಯಾಗುತ್ತಲೇ ಬಜೆಟ್ ಬಗ್ಗೆ ಆಕ್ಷನ್ ರಿಯಾಕ್ಷನ್ ಕೂಡ ಶುರುವಾಯ್ತು. ಹಾಗಾದ್ರೆ ಬಜೆಟ್ ಬಗ್ಗೆ ನಾಯಕರ ಅಭಿಪ್ರಾಯಗಳೇನು ಅಂತೀರಾ ಈ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್ ..
ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ಮಂಡನೆ ಬಗ್ಗೆ ರಾಜ್ಯದ ಜನರು ಕಾತುರದಿಂದ ಎದುರು ನೋಡ್ತಿದ್ರು.. ಗ್ಯಾರಂಟಿ ಯೋಜನೆಗಳನ್ನ ಈಡೇರುಸ್ತಾರಾ ಇಲ್ಲಾ ಇನ್ನೂ ಕಂಡೀಷನ್ ಹಾಕ್ತಾರಾ ಎಂಬ ಚರ್ಚೆ ಶುರುವಾಗಿತ್ತು. ಬಜೆಟ್ ಮಂಡನೆಗೆ ಸಾಕಷ್ಟು ಲೆಕ್ಕಾಚಾರ ಮಾಡಿ , ಕಳೆದ ೨೦-೨೫ ದಿನಗಳಿಂದ ಸತತವಾಗಿ ಅಧಿಕಾರಿಗಳ ಜೊತೆ ಸಭೆ ಮೇಲೆ ಸಭೆ ಮಾಡಿ ಮಾಹಿತಿಯನ್ನ ಪಡೆದುಕೊಂಡಿದ್ರು ಸಿಎಂ ಸಿದ್ದರಾಮಯ್ಯ. ಅದ್ರಲ್ಲೂ ಹೊಸ ಯೋಜನೆಗಳನ್ನ ಜಾರಿಗೆ ತರಬೇಕಾ, ಗ್ಯಾರಂಟಿ ಯೋಜನೆಗೆ ಎಷ್ಟೆಲ್ಲಾ ಹಣ ಮೀಸಲಿಡಬೇಕು ಅದಕ್ಕೆ ಸಂಪನ್ಮೂಲಗಳ ಸಂಗ್ರಹ ಹೇಗೆ ಮಾಡೋದು ಅನ್ನೋದನ್ನ ಅಳೆದು ತೂಗಿ ಸಿಎಂ ಸಿದ್ದರಾಮಯ್ಯ ಇಂದು ಬಜೆಟ್ ಮಂಡನೆ ಮಾಡಿದ್ರು.
ಬಜೆಟ್ ಮಂಡಿಸುತ್ತಿದ್ದಂತೆ ಮಾಜಿ ಸಿಎಂ ಕುಮಾರಸ್ವಾಮಿ ಬಜೆಟ್ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ರು.ವಿಧಾನಸೌದದ ತಮ್ಮ ಕಚೇರಿಯಲ್ಲೇ ಬಜೆಟ್ ವೀಕ್ಷಣೆ ಮಾಡ್ತಿದ್ದ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ಕೇಂದ್ರ ಸರ್ಕಾರ ಹಾಗೂ ಹಿಂದಿನಸರ್ಕಾರದ ಮೇಲೆ ಗೂಬೆ ಕೂರಿಸುವ ಬಜೆಟ್ ಅಷ್ಟೆ. ದೂಷಣೆ ಮಾಡೋದಕ್ಕೆ ಹೆಚ್ಚಿನ ಪುಟಗಳನ್ನ ಮಾಡಿಕೊಂಡಿದ್ದಾರೆ. ತೆರಿಗೆ ಸಂಗ್ರಹಕ್ಕೆ ಮುಂದಾಗಿದ್ದೀರಾ ಆದ್ರು ೮೫ ಸಾವಿರ ಕೋಟಿ ಸಾಲ ಯಾಕೆ ಮಾಡ್ತಿದ್ದಿರಾ.. ಗ್ಯಾರಂಟಿ ಯೋಜನೆಗಳಿಗೆ ಕಂಡೀಷನ್ ಹಾಕಿ ಜನರಿಗೆ ಟೋಪಿ ಹಾಕಿದ್ದಾರೆ ಅಂತಾ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಇನ್ನೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪ್ರತಿಕ್ರಿಯೆಗೆ ತಿರುಗೇಟು ನೀಡಿದ ಸಚಿವ ಚೆಲುವರಾಯಸ್ವಾಮಿ,ಇದು ಪರಿಷ್ಕರಣಾ ಬಜೆಟ್ , ಯಾರೇ ಆ ಸ್ಥಾನದಲ್ಲಿದ್ರು ಸಿಎಂ ಬಜೆಟ್ ಕೊಡಲು ಸಾಧ್ಯವಿಲ್ಲ. ಎಲ್ಲರೂ ಒಪ್ಪುತ್ತಾರೆ. ವಿರೋಧ ಪಕ್ಷ ಇದನ್ನ ಟೀಕಿಸ್ತಾರೆ. ಇನ್ನೂ ಕುಮಾರಸ್ವಾಮಿ ಅವರು ಸದನದ ಒಳಗೆ ಕೂತು ಕೇಳಿಲ್ಲ.ಅವರು ಇಲ್ಲಿದ್ದು ಹೇಳಿದ್ದು ಸೂಕ್ತವಾ, ಹೊರಗೆ ಕೂತು ಹೇಳೋದು ಸೂಕ್ತವಾ. ಅವರ ಬಗ್ಗೆ ನಗಬೇಕೋ, ಅಳಬೇಕೋ ಗೊತ್ತಿಲ್ಲ ಅಂತಾ ಹೆಚ್.ಡಿ.ಕೆ ವಿರುದ್ಧ ಮತ್ತೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ನಂತ್ರ ವಿಪಕ್ಷಗಳ ನಾಯಕರು ಸರ್ಕಾರದ ವಿರುದ್ದ ಮುಗಿಬಿದ್ರು. ಮಾಜಿ ಸಚಿವ ಆರ್ ಅಶೋಕ್ ಬಜೆಟ್ ಬಗ್ಗೆ ರಿಯಾಕ್ಷನ್ ನೀಡಿ, ಸಿದ್ದರಾಮಯ್ಯ ಬಜೆಟ್ ಅದು ಕರ್ನಾಟಕದ ಜನರ ಮೇಲೆ ಸಾಲ ಹೊರಿಸೋ ಬಜೆಟ್. ಈಗಾಗಲೇ ಸಾಲದಲ್ಲಿದ್ದಾರೆ, ಇಂದು ತೆಗೆದುಕೊಳ್ಳುವ ಸಾಲ ಮತ್ತಷ್ಟು ಹೊರೆ ಆಗಲಿದೆ.ಬಸ್ ಫ್ರೀ, ಎಲ್ಲಾ ಫ್ರೀ ಅನ್ನೋದು ಹೊರೆ ಆಗಲಿದೆ. ತೆರಿಗೆ ಹೊರೆ, ಸಿದ್ದರಾಮಯ್ಯ ಜನರ ಮೇಲೆ ಗೂಬೆ ಕೂರಿಸೋ ಕೆಲಸ ಮಾಡಲಿದ್ದಾರೆ. ಎಂಪಿ ಎಲೆಕ್ಷನ್ ಮುಗಿಯೋವರೆಗೂ ಅನುದಾನ ಕೇಳಬೇಡಿ ಅಂದ್ರು. ಪೊಳ್ಳು ಗ್ಯಾರಂಟಿ ಬಿಟ್ರೆ, ನೀರಾವರಿ ಯೋಜನೆ ಮಾಡಲು ಸಾಧ್ಯವಿಲ್ಲ. ಅದ್ರಲ್ಲೂ ಮೇಕೆದಾಟು ರಕ್ತ ಹರಿಸಿ ಕಟ್ತೀನಿ ಅಂತಿದ್ದಾರೆ ಇದ್ರಿಂದ ಅವರ ಯೋಗ್ಯತೆ ಗೊತ್ತಾಗಲಿದೆ ಅಂತಾ ಕಿಡಿಕಾರಿದ್ದಾರೆ
: ಒಟ್ನಲ್ಲಿ ಇವತ್ತು ಸಿಎಂ ಸಿದ್ದರಾಮಯ್ಯ ಅವರು ಯಶಸ್ವಿಯಾಗಿ ಬಜೆಟ್ ಮಂಡನೆ ಮಾಡಿದ್ದಾರೆ.ಇದಕ್ಕೆ ಏಟು ಎದುರೇಟು ಶುರುವಾಗ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿಟ್ಟು ನುಡಿದಂತೆ ನಡೆದಿದ್ದೇವೆ ಎಂದು ಹೇಳಿದ್ದಾರೆ.. ಗ್ಯಾರಂಟಿ ಯೋಜನೆಗಳ ಮೇಲೆ ಬಜೆಟ್ ಹೆಚ್ಚು ಕೇಂದ್ರಿಕೃತವಾಗಿದ್ದು. ವಿಪಕ್ಷಗಳು ಗ್ಯಾರಂಟಿ ಯೋಜನೆ ವಿಚಾರದಲ್ಲಿ ಸರ್ಕಾರ ಜನರಿಗೆ ಮೋಸ ಮಾಡಿದೆ ಸರ್ಕಾರ ಅಂತಾ ಕಿಡಿಕಾರ್ತಿವೆ..