ಯಾದಗಿರಿ : ಮಾಜಿ ಸಿಎಂ HDK ಆಣೆ-ಪ್ರಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ್ (Minister Sharanabasappa Darshanapur) ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದೊಂದಿಗೆ ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ್ ಮಾತನಾಡಿ, ಆತ ಮೊದಲು ನಾನು ಬಹಳ ಸ್ವಚ್ಛ ಇದ್ದೇನೆ ಅನ್ನುವುದು ಪ್ರಮಾಣ ಮಾಡಲಿ ಆ ಮೇಲೆ ನಾವು ಪ್ರಮಾಣ ಮಾಡೋದ್ದನ್ನ ನೋಡೋಣ. ಯಾಕೆಂದ್ರೆ ಸುಳ್ಳು ಹೇಳುವುದರಲ್ಲಿ ಅವರಿಗೆ ಮೀರಿಸುವವರು ಯಾರು ಇಲ್ಲ. ಕ್ರಿಕೆಟ್ ಮ್ಯಾಚ್ ನೋಡಿದ ಸಿಎಂಗೆ ಟೀಕೆ ಮಾಡಿದ್ರು, ಅವರು ಸಿನಿಮಾಗಳನ್ನ ಮಾಡಲ್ವಾ, ಅವರ ಮಗ ಸಿನಿಮಾ ಮಾಡ್ತಾರೆ ಸಿನಿಮಾ ಮಾಡೋರಿಗೆ ಬೈಬೇಕಾ ನೋಡುವವರಿಗೆ ಬೈ ಬೇಕಾ..? ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಬಗ್ಗೆ ಮಾತಾಡೋಕೆ ಏನು ಉಳಿದಿಲ್ಲ, ಕುಮಾರಸ್ವಾಮಿಗೆ ಅಷ್ಟು ಮಹತ್ವ ಕೊಡುವ ಅವಶ್ಯಕತೆ ಇಲ್ಲ ಅವರು ಹತಾಶರಾಗಿದ್ದಾರೆ. ಮೊದಲು ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಅಂತಿದ್ರು ಈಗ ಡಿಕೆಶಿ ಅಂತಿದ್ದಾರೆ. ಬಿಜೆಪಿ ಬಗ್ಗೆ ಟೀಕೆ ಮಾಡ್ತಾಯಿದ್ರು ಅವರ ಜೊತೆಗೆ ಹೋಗಿದ್ದಾರೆ. ಕುಮಾರಸ್ವಾಮಿ ಬಗ್ಗೆ ಮಾತಾಡೊ ಬಗ್ಗೆ ಅವಶ್ಯಕತೆ ಇಲ್ಲ ಅವರಿಗೆ ನಾನು ಹತ್ರದಿಂದ ನೋಡಿದವನು ಎಂದು ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಟೀಕಿಸಿದ್ದಾರೆ.