ಬೆಂಗಳೂರು : ಹೊಸ ವರ್ಷಕ್ಕೆ ಸಿಹಿ ಹಾಗೂ ಹೂಗುಚ್ಚ ತರಬೇಡಿ, ಅದೇ ಹಣವನ್ನ ಅನಾಥಾಶ್ರಮಕ್ಕೆ ನೀಡಿ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ರಿಂದ ಕಿರಿಯ ಪೊಲೀಸ್ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಇತ್ತೀಚೆಗೆ ನಡೆದ ವರ್ಚ್ಯುಯಲ್ ಮೀಟಿಂಗ್ ನಲ್ಲಿ ನಗರ ಪೊಲೀಸರಿಗೆ ಪೊಲೀಸ್ ಆಯುಕ್ತ ಬಿ ದಯಾನಂದ್ ಕಿವಿ ಮಾತು ಹೇಳಿದ್ದಾರೆ. ಪ್ರತೀ ವರ್ಷ ಹೊಸ ವರ್ಷಾಚರಣೆಗೆ ಶುಭಾಶಯ ಕೋರಲು ಹೂಗುಚ್ಚ ಸಿಹಿ ತರ್ತಾರೆ.. ಇದಕ್ಕೆ ಪೊಲೀಸ್ ಅಧಿಕಾರಿಗಳು ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ. ಹೀಗೆ ಹಣ ವ್ಯರ್ಥಮಾಡಬೇಡಿ ಬದಲಿಗೆ ಅದೇ ಹಣದಿಂದ ಅನಾಥಾಶ್ರಮಗಳಿಗೆ ದಿನಸಿ, ಬಟ್ಟೆ ಅಥವಾ ಊಟಕ್ಕೆ ನೀಡಿ. ಹೀಗೆ ಅನಾಥಾಶ್ರಮಕ್ಕೆ ಏನಾದ್ರು ಕೊಟ್ರೆ ಆ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗುವಂತೆಆಚರಣೆ ಮಾಡಿ ಎಂದು ಕಮಿಷನರ್ ಕಿವಿಮಾತು ಹೇಳಿದ್ದಾರೆ.