ಮಂಗಳೂರು : ಮಂಗಳೂರಿನ ಕೊಣಾಜೆ ಬಳಿಯ ಅಸೈಗೋಳಿಯ ಪೊಲೀಸ್ ಕ್ವಾಟ್ರಸ್‌ನಲ್ಲಿ ಕೆಎಸ್ಆರ್‌ಪಿ (KSRP) ಪೊಲೀಸರಿಂದಲೇ ಡ್ರೈನೇಜ್ ಕ್ಲೀನಿಂಗ್ (Drainage cleaning)ನನ್ನು ಮೇಲಾಧಿಕಾರಿಗಳು ಮಾಡಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಮಂಗಳೂರಿನ ಅಸೈಗೋಳಿಯ ಪೊಲೀಸ್ ವಸತಿ ಗೃಹದಲ್ಲಿ ನಿರ್ವಹಣೆ ಇಲ್ಲದೆ ಅವ್ಯವಸ್ಥೆ ಉಂಟಾಗಿದೆ. ಈ ಸಂಬಂದ ಡ್ರೈನೇಜ್ ಬ್ಲಾಕ್ ಆಗಿದ್ದನ್ನು ಕೆಎಸ್‌ಆರ್‌ಪಿ ಪೊಲೀಸರಿಂದಲೇ ಡ್ರೈನೇಜ್ ಕ್ಲೀನಿಂಗ್ ಮಾಡಲಾಗಿದೆ. ವಸತಿ ಗೃಹದ ಇನ್ ಚಾರ್ಜ್ ಆಗಿದ್ದ ಮಹಮ್ಮದ್ ಹ್ಯಾರೀಸ್ ನೇತೃತ್ವದಲ್ಲೇ ಡ್ರೈನೇಜ್ ಕ್ಲೀನಿಂಗ್ ಮಾಡಿಸಲಾಗಿದೆ.
ಪೌರಕಾರ್ಮಿಕರು ಮಾಡಬೇಕಾಗಿದ್ದ ಕೆಲಸವನ್ನು ಕೆಎಸ್‌ಆರ್‌ಪಿ ಪೊಲೀಸರಲ್ಲಿ ಮಾಡಿಸಿದ್ದು ಎಷ್ಟು ಸರಿ ಎಂದು ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಕೆಎಸ್‌ಆರ್‌ಪಿ ಇನ್ಸ್‌ಪೆಕ್ಟರ್ ಮಹಮ್ಮದ್ ಹ್ಯಾರೀಸ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರಲ್ಲಿ ಕೆಎಸ್‌ಆರ್‌ಪಿ ಪೊಲೀಸರಿಂದಲೇ ಡ್ರೈನೇಜ್ ಕ್ಲೀನಿಂಗ್ ಮಾಡಿದ ಮೇಲಾಧಿಕಾರಿ ಮಹಮ್ಮದ್ ಹ್ಯಾರೀಸ್ ಕ್ರಮ ಕೈಗೊಳ್ಳಲಾಗುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.