ಬೆಂಗಳೂರು : ಹೊಸ ವರ್ಷ ಹತ್ತಿರ ಬರ್ತಿದ್ದಂತೆ ಸಿಟಿಯಲ್ಲಿ ಡ್ರಗ್ಸ್ ಹೆಚ್ಚಾಗುತ್ತಿದೆ. ರಾಜಧಾನಿ ಬೆಂಗಳೂರಲ್ಲಿ ಮಾದಕ ವಸ್ತುಗಳು ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು. ಖಾಕಿ ಪಡೆ ಎಷ್ಟೇ ಎಚ್ಚರಿಕೆ ವಹಿಸಿದ್ದಾರೆ. ಖತರ್ನಾಕ್ ಅಸಾಮಿಗಳು ಡ್ರಗ್ಸ್ ಪೂರೈಕೆಗೆ ನಾನಾ ದಾರಿಗಳನ್ನ ಹುಡುಕುತ್ತಾರೆ. ಮೊನ್ನೆಯಷ್ಟೆ ಸಿಸಿಬಿ ಪೊಲೀಸರ ಬೇಟೆಯಲ್ಲಿ ಸುಮಾರು 21 ಕೋಟಿಗೂ ಅಧಿಕ ಮೊತ್ತದ ಮಾದಕ ವಸ್ತುಗಳು ಪತ್ತೆಯಾಗಿದ್ವು. ಓರ್ವ ವಿದೇಶಿ ಡ್ರಗ್ ಪೆಡ್ಲರ್ ಬಂಧನವಾಗಿದ್ದಾನೆ. ಈ ಘಟನೆ ಬೆನ್ನಿಗೆ ಇದೇ ರೀತಿ ವರ್ಷಾಚರಣೆಯ ಪಾರ್ಟಿಗಳಿಗಾಗಿ ಸಂಗ್ರಹಿಸಿಟ್ಟಿದ್ದ ಡ್ರಗ್ಸ್ ಅಡ್ಡೆ ಮೇಲೆ ಸಿಸಿಬಿ ಟೀಂ ದಾಳಿ ನಡೆಸಿದ್ದು, ಮೂವರು ಡ್ರಗ್ ಪೆಡ್ಲರ್ಗಳನ್ನ ಸಮೇತ ಅರ್ಧ ಕೋಟಿಗೂ ಹೆಚ್ಚು ಮೊತ್ತದ ಮಾದಕ ವಸ್ತುಗಳನ್ನ ಸೀಜ್ ಮಾಡಲಾಗಿದೆ.
ಯೆಸ್. ನೈಜೀರಿಯನ್ ಮೂಲದ ಜೋಶುವಾ, ಕೇರಳದ ಅಬ್ದುಲ್ ಅಹದ್, ನಿಸಮ್ ಎಂಬುವರೇ ಬಂಧಿತ ಡ್ರಗ್ ಪೆಡ್ಲರ್‌ಗಳು, ಹೊಸ ವರ್ಷಾಚರಣೆಯ ಪಾರ್ಟಿಗಳಿಗಾಗಿ ಈ ಆರೋಪಿಗಳು ಕೋರಮಂಗಲದ ಹೋಟೆಲ್ ಒಂದರ ರೂಂ ನಲ್ಲಿ ಡ್ರಗ್ಸ್ ಸಂಗ್ರಹಿಸಿಟ್ಟಿದರು. ಈ ಮಾಹಿತಿ ಅರಿತ ಸಿಸಿಬಿ ಟೀಂ ಹೋಟೆಲ್ ಮೇಲೆ ದಾಳಿ ಮಾಡಿ 86.89 ಗ್ರಾಂ. MDMA, 100 LSD Strips ಸೇರಿದಂತೆ ಸುಮಾರು 52 ಲಕ್ಷ ಮೊತ್ತದ ಅನೇಕ ವಿಧದ ಮಾದಕ ವಸ್ತುಗಳು ಸೀಜ್ ಮಾಡಲಾಗಿದೆ.
ಒಟ್ನಲ್ಲಿ ನ್ಯೂ ಇಯರ್ ಹಿನ್ನೆಲೆ ರಾಜಧಾನಿಯಲ್ಲಿ ನಶೆ ಲೋಕ ಸೃಷ್ಟಿ ಮಾಡಲು ಡ್ರಗ್ ಪೆಡ್ಲರ್‌ಗಳ ಆಕ್ಟಿವ್ ಆಗಿದ್ದಾರೆ. ಆದರೆ ಬೆಂಗಳೂರು ಸಿಸಿಬಿ ಅಧಿಕಾರಿಗಳು ಇಂತ ಖತರ್ನಾಕ್ ಗಳ ಪ್ಲಾನ್‌ಗಳನ್ನ ಬ್ರೇಕ್ ಮಾಡಿ, ಜೈಲಿನ ದಾರಿ ತೋರಿಸ್ತಿದ್ದಾರೆ.