ಬೆಂಗಳೂರು : ಹಿಂದೆ ನಾನು ಸ್ಫರ್ಧೆ ಮಾಡಬೇಕು ಅಂದುಕೊಂಡಿದ್ದೆ ಈಗ ಸ್ಫರ್ಧೆ ಮಾಡುವ ಇಚ್ಚೆ ನನಗಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸಚಿವರ ಸ್ಫರ್ಧೆ ವಿಚಾರವಾಗಿ ಮಾತನಾಡಿದ ಅವರು ಸಚಿವರ ಸ್ಫರ್ಧೆ ವಿಚಾರ ಎಲ್ಲೂ ಚರ್ಚೆಯಾಗಿಲ್ಲ. ಯಾಕೆ ಈ ವಿಚಾರ ಬಂತೋ ಗೊತ್ತಿಲ್ಲ. ನನ್ನ ಹೆಸರು, ಕೋಲಾರ,ಚಿತ್ರದುರ್ಗಕ್ಕೆ ಚರ್ಚೆಯಾಗಿದೆ. ನನ್ನ ಹೆಸರು ಯಾರು ಹೇಳಿದ್ರು ಗೊತ್ತಿಲ್ಲ. ತುಮಕೂರು ಕ್ಷೇತ್ರಕ್ಕೆ ನನ್ನ ಹೆಸರು ಇಲ್ಲ. ಹಿಂದೆ ನಾನು ಸ್ಫರ್ಧೆ ಮಾಡಬೇಕು ಅಂದುಕೊಂಡಿದ್ದೆ. ಈಗ ಸ್ಫರ್ಧೆ ಮಾಡುವ ಇಚ್ಚೆ ನನಗಿಲ್ಲ. ಸತೀಶ್ ಜಾರಕಿಹೊಳಿ ಹೆಸರು ಚರ್ಚೆ ಆಗಿರಬಹುದು. ಅಂತಿಮ ನಿರ್ಧಾರ ಹೈಕಮಾಂಡ್ ನಾಯಕರು ಮಾಡುತ್ತಾರೆ ಎಂದು ಹೇಳಿದರು.
ಸುರ್ಜೇವಾಲ ರಾಜ್ಯಕ್ಕೆ ಆಗಮನದ ವಿಚಾರವಾಗಿ ಮಾತನಾಡಿದ ಅವರು ಅಜೆಂಡಾ ಅಂತ ಏನು ಹೇಳಿಲ್ಲ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಬರ್ತಾ ಇದ್ದಾರೆ. ಸಿಎಂ,ಡಿಸಿಎಂ, ಡಿಸಿಸಿ ಅಧ್ಯಕ್ಷರ ಜೊತೆ ಸಭೆ ಮಾಡ್ತಾರೆ. ಜಿಲ್ಲಾ ಮಟ್ಟದ ನಾಯಕರ ಮಾತನಾಡುವ ಅವಶ್ಯಕತೆ ಇದೆ.
ಚುನಾವಣೆ ತಯಾರಿ ಮಾಡಬೇಕಿದೆ. ಅದಕ್ಕಾಗಿ ಬರ್ತಾ ಇದ್ದಾರೆ. ನನ್ನ ಜೊತೆ ಕೂಡ ಮಾತನಾಡಿದ್ದಾರೆ. ಹೆಚ್ಚು ಸೀಟ್ ಗೆಲ್ಲಬೇಕಿದೆ, ಸರ್ಕಾರವು ನಮ್ಮದಿದೆ. ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ. ಗ್ಯಾರಂಟಿ ಇಂಪ್ಯಾಕ್ಟ್ ಎಷ್ಟಾಗಿದೆ. ಚುನಾವಣೆ ನಂತರ ಏನಾಗಿದೆ. ಇದರ ಬಗ್ಗೆ ಎಲ್ಲ ತಿಳಿದುಕೊಳ್ಳಬೇಕಿದೆ. ಬಡವರಿಗೆ ಸರ್ಕಾರದ ಯೋಜನೆ ತಲುಪಿದ್ದು ಚರ್ಚೆ ಆಗುತ್ತೆ. ಚುನಾವಣೆ ದೃಷ್ಟಿಯಿಂದ ನಾವು ಅವಲೋಕನ ಮಾಡುತ್ತೇವೆ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಐದು ಸಾವಿರ ಹೆಚ್ಚು ಸಹಾಕರಿ ಆಗುತ್ತೆ. ಹೀಗಾಗಿ ಎಲ್ಲ ರೀತಿಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ