ಬಾಗಲಕೋಟೆ : ತೇರದಾಳ ಪಟ್ಟಣದಲ್ಲಿ ವಿಷಕಾರಿ ಹಣ್ಣು ಸೇವಿಸಿ ಐವರು ಮಕ್ಕಳು ಅಸ್ವಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ.
ತೇರದಾಳ ಪಟ್ಟಣದಲ್ಲಿರುವ ಮೆಟ್ರಿಕ್ ಪೂರ್ವ ವಸತಿ ನಿಲಯದ 8ನೇ ತರಗತಿ ವಿದ್ಯಾರ್ಥಿಗಳು ಬಾದಾಮಿ ಹಣ್ಣೆಂದು ವಿಷಕಾರಿ ಹಣ್ಣು ಸೇವಿಸಿ ಮಕ್ಕಳು ಆಸ್ಪತ್ರೆಯ ಪಾಲಾಗಿದ್ದಾರೆ.
ಆಕಾಶ ಮಾದರ, ಮಲ್ಲು ಮಾದರ, ಮಹಾಂತೇಶ ಮಾದರ, ಮುತ್ತು ಮಾದರ ಹಾಗೂ ಅಪ್ಪಾಜಿ ಮಾದರ ವಿಷಕಾರಿ ಹಣ್ಣು ಸೇವಿಸಿ ಆಸ್ಪತ್ರೆಗೆ ಸೇರಿದ ವಿದ್ಯಾರ್ಥಿಗಳು ಎಂದು ತಿಳಿಯಲಾಗಿದೆ. ಅಸ್ವಸ್ಥಗೊಂಡು ಒದ್ದಾಡುತ್ತಿದ್ದ ಮಕ್ಕಳನ್ನು ಕೂಡಲೇ ರಬಕವಿ ಬನಹಟ್ಟಿ ಸಮುದಾಯ ಆಸ್ಪತ್ರೆಗೆ ಸೇರಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಮಖಂಡಿ ತಾಲೂಕು ಆಸ್ಪತೆಗೆ ದಾಖಲು ಮಾಡಲಾಗಿದೆ.