ಸರ್ಕಾರ ಘೋಷಣೆ ಮಾಡಿರುವ. ಐದು ಪ್ರಮುಖ ಗ್ಯಾರಂಟಿ ಗಳಲ್ಲಿ ಒಂದಾದ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ರಾಜ್ಯದ ನಾಲ್ಕು ನಿಗಮಗಳ ಅಧಿಕಾರಿಗಳ ಜತೆ ಸಾರಿಗೆ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿ ಮಾಹಿತಿ ಪಡೆದ್ರು. ಈಗಾಗಲೇ ಎಷ್ಟು ಜನ ಪ್ರಯಾಣ ಮಾಡುತ್ತಿದ್ದಾರೆ, ಎಷ್ಟು ಹೊಸ ಬಸ್ ಗಳ ಬೇಡಿಕೆಯಿದೆ, ಅನ್ನೋದರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಮೇ 2013 ರಿಂದ 2018 ಆಗಸ್ಟ್ ವರೆಗೆ ಒಟ್ಟಾರೆ 205 ಮತ್ತು 2018 ರಿಂದ 2023. ರ ವರೆಗೆ 54 ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ದೇಶದ ಹೆಮ್ಮೆಯ ಸಂಸ್ಥೆ ಎಂದು ಶ್ಲಾಘನೆ ಮಾಡಿದ್ರು.
ಇನ್ನೂ ನಾಳೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡುತ್ತೇವೆ. ನಾಳೆ ಮೀಟಿಂಗ್ ಇದೆ ಗುರುವಾರ ಕ್ಯಾಬಿನೆಟ್ ಇದೆ ಅಲ್ಲಿ ಎಲ್ಲ ಮಾಹಿತಿ ನೀಡುತ್ತೇವೆ ಎಂದ್ರು. ನಾವು ಈಗಾಗಲೇ ಘೋಷಣೆ ಮಾಡಿರುವ ಹಾಗೆ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ ಅಷ್ಟೇ ಅದರಲ್ಲಿ ಯಾವುದೇ ಕಂಡಿಷನ್ಸ್ ಇಲ್ಲ. ಕೆಲಸಕ್ಕೆ, ಹೋಗೋರು ಆಗಿರಬಹುದು, ವಿದ್ಯಾರ್ಥಿನಿಯರಿಗೆ ಆಗಿರಬಹುದು ಯಾರೇ ಆಗಿರಲಿ ಉಚಿತ ಪ್ರಯಾಣ ಮಾಡಬಹುದು ಸದ್ಯಕ್ಕೆ ಯಾವುದೇ ಕಂಡಿಷನ್ಸ್ ಇಲ್ಲ ಗುರುವಾರ ತಿಳಿಸುತ್ತೇವೆಂದು ಹೇಳಿದ್ರು.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್