ಹುಬ್ಬಳ್ಳಿ : ವಿದ್ಯುತ್ ದರ ಹೆಚ್ಚಳ ಹಿನ್ನಲೆ ಛೇಂಬರ್ ಆಫ್ ಕಾಮರ್ಸ್ ಇವತ್ತು ಕರ್ನಾಟಕ ಬಂದ್ ಗೆ ಕರೆಕೊಟ್ಟಿದೆ. ಇದಕ್ಕೆ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ನೆಹರು ಮೈದಾನ ಬಳಿರುವ ಕೆಸಿಸಿಐ ಕಚೇರಿಯಿಂದ ಬೃಹತ್ ಪ್ರತಿಭಟನೆ ಆರಂಭವಾಗಿದೆ. ಕೆಸಿಸಿಐ ಕಚೇರಿಯಿಂದ ತಹಶಿಲ್ದಾರರ ಕಚೇರಿಯವರಿಗೆ ಈ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ. ಬಾರ್, ಹೋಟೆಲ್, ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಂಸ್ಥೆಗಳಿಂದ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಕೈಗಾರಿಕೋದ್ಯಮಿಗಳು ಚಿಮಣಿ ಹಿಡಿದು ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇತ್ತ ಹಾವೇರಿ ನಗರದಲ್ಲೂ ಕರ್ನಾಟಕ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹಾವೇರಿ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಹೊಸಮನಿ ಸಿದ್ದಪ್ಪ ವೃತ್ತದ ವರೆಗೆ ಪ್ರತಿಭಟನಾ ರ್ಯಾಲಿ ಆರಂಭವಾಗಿದೆ. ಕಿರು ಕೈಗಾರಿಕೋದ್ಯಮಿಗಳು, ಎಪಿಎಂಸಿ ವರ್ತಕರು, ಕಿರಾಣಿ ವ್ಯಾಪಾದ್ಥರು, ಬಟ್ಟೆ ಅಂಗಡಿ ಮಾಲೀಕರು, ಗಿರಣಿ ಮಾಲೀಕರು ಸೇರಿದಂತೆ ಸಾವಿರಾರು ಜನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.