ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬ ಪ್ರಯುಕ್ತ ಮಹಿಳೆಯರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಹಬ್ಬದ ದಿನ ಮಹಿಳೆಯರಿಗೆ ಬಂಪರ್ ಗಿಫ್ಟ್ ಸಿಗಲಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಅರಿಶಿನ, ಕುಂಕುಮ & ಬಳೆ ಗಿಫ್ಟ್ ಕೊಡೋಕೆ ಸರ್ಕಾರ ಮುಂದಾಗಿದೆ.
ಧಾರ್ಮಿಕ ಧತ್ತಿ ಇಲಾಖೆಯಿಂದ ಮಹಿಳೆಯರಿಗೆ ಹಬ್ಬದ ಪ್ರಯುಕ್ತ ಅರಿಶಿನ ಕುಂಕುಮ ಗಿಫ್ಟ್ ಸಿಗಲಿದೆ. ಆ.25 ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವ್ರತ ಹಿನ್ನೆಲೆ, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಕುಂಕುಮ, ಬಳೆ ಸಿಗಲಿದೆ. ಇದರ ವೆಚ್ಚವನ್ನು ಆಯಾ ದೇವಸ್ಥಾನದ ನಿಧಿಯಿಂದ ಭರಿಸಲು ಸೂಚನೆ ನೀಡಲಾಗಿದೆ.
ಪ್ರಸಾದ ರೂಪವಾಗಿ ಅರಿಶಿನ, ಕುಂಕುಮವನ್ನು ಕಾಗದದ ಲಕೋಟೆಗಳಲ್ಲಿ ಸರ್ಕಾರದ ಲಾಂಛನದೊಂದಿಗೆ ದೇವಾಲಯದ ಹೆಸರು ಮುದ್ರಿಸಿ ಲಕೋಟೆ ತಯಾರಿಸಿಕೊಂಡು ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ನೀಡಲು ಸೂಚಿಸಲಾಗಿದೆ.