ಬೆಂಗಳೂರು : ರಾಜ್ಯ ಬಿಜೆಪಿಯ ಆಂತರಿಕ ಸಮಸ್ಯೆಗಳ ಬಗ್ಗೆ ಮಾತನಾಡೋದಕ್ಕೆ ಹೈಕಮಾಂಡ್ ನಾಯಕರನ್ನು ಭೇಟಿಗೆ ಅವಕಾಶ ನೀಡಿಲ್ಲ ಎಂದು ದೆಹಲಿಗೆ ತೆರಳಿದ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ನಿರಾಸೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿಯ ಆಂತರಿಕ ಸಮಸ್ಯೆಗಳ ಕುರಿತು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಅವರಿಗೆ ಡಿವಿ ಸದಾನಂದಗೌಡ ಪತ್ರ ಬರೆದಿದ್ದರು. ಪತ್ರ ಓದಿದ್ದ ಜೆಪಿ ನಡ್ಡಾ ದೆಹಲಿಯಲ್ಲಿ ಬಂದು ಭೇಟಿ ಮಾಡಿ, ಚರ್ಚಿಸಲು ಸೂಚನೆ ನೀಡಿದ್ದರು. ಈ ಬೆನ್ನಲ್ಲೆ ಡಿವಿಎಸ್, ಜೆಪಿ ನಡ್ಡಾ ಸೇರಿದಂತೆ ಬೇರೆ ಬೇರೆ ನಾಯಕರ ಭೇಟಿಗೆ ದೆಹಲಿಗೆ ಬಂದಿದ್ದರು .ಪಂಚ ರಾಜ್ಯಗಳ ಚುನಾವಣೆ ಭರದಲ್ಲಿರುವ ವರಿಷ್ಠರು ಭೇಟಿಗೆ ಸಮಯ ನೀಡಿಲ್ಲ ಎಂದಿದ್ದಾರೆ.