ಬೆಳಗಾವಿ : ಹಿಂದುಗಳು ಸುರಕ್ಷಿತವಾಗಿ ಇರಬೇಕು ಅಂದ್ರೇ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಹಿಂದು ಧ್ವನಿಯನ್ನ ಕುಗ್ಗಿಸುವ ಹುನ್ನಾರ ರಾಜ್ಯದಲ್ಲಿ ನಡೆಯುತ್ತಿದೆ. ಸಿಟಿ ರವಿಯವರನ್ನ ಸೋಲಿಸಿದ್ರೂ, ಸಂತೋಷ್ ಅವರು ಬಗ್ಗೆ ಅಪಪ್ರಚಾರ ಮಾಡಿದ್ರೂ. ಪ್ರಧಾನಿಯವರು ರಾಜ್ಯದಲ್ಲಿ ಓಡಾಡಿದ್ದನ್ನ ನೋಡಿ ಬಹಳ ಕೆಟ್ಟ ಅನಿಸುತ್ತೆ. ದೇಶ ಉಳಿಯಬೇಕು, ಹಿಂದುಗಳು ಸುರಕ್ಷಿತವಾಗಿ ಇರಬೇಕು ಅಂದ್ರೇ ಬಿಜೆಪಿ ಅಧಿಕಾರಕ್ಕೆ ಬರಬೇಕು. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ 28ಸ್ಥಾನ ಗೆದ್ದು ಗೌರವ ಕೊಡಬೇಕಿದೆ. ಪಾಟ್ನಾದಲ್ಲಿ ಮೊನ್ನೆ ತುಡಗರು, ಕಳ್ಳರು, ಲಪಂಗರು, ಬದ್ಮಾಶರು ಕೂಡಿದ್ರೂ. ಪಾಕಿಸ್ತಾನ ದಿವಾಳಿ ಆದಂತೆ ಮಾಡಲು ಹೊರಟ್ಟಿದ್ದಾರೆ ಅವರು. ಭಾರತ ಪಾಕಿಸ್ತಾನ ಆಗಬೇಕಾ ಎಂದು ಪ್ರಶ್ನಿಸಿದರು.
ಇನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಐದನೇ ಆರ್ಥಿಕ ರಾಷ್ಟ್ರವಾಗಿದೆ. ನಮ್ಮಲ್ಲಿಯ ಕೆಲವು ಅತೃಪ್ತ ಆತ್ಮಗಳು ಅವರನ್ನ ಕೇಡವುತ್ತೇವಿ ಅಂತಾ ಓಡಾಡಿದ್ರೂ. ಕ್ಷೇತ್ರಕ್ಕೆ ಹೋಗದೇ ಗೆದ್ದಿದ್ದು ನಾನು ಮತ್ತು ಬೊಮ್ಮಾಯಿಯವರು. ಸೋತಿದ್ದೇವೆ ಅಂತಾ ಮನೆಯಲ್ಲಿ ಕುಳಿತುಕೊಂಡ್ರೇ ಆಗಲ್ಲಾ. ನಾವೆಲ್ಲರೂ ಕೂಡಿ ಇವತ್ತಿನಿಂದ ಕೆಲಸ ಮಾಡಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದು ಕರೆಕೊಟ್ಟರು.
ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಮಾತನಾಡಿದ ಅವರು, ಗ್ಯಾರಂಟಿ ಎಲ್ಲವೂ ಮುಗಿತು ಇವರಿಗೆ ಗ್ಯಾರಂಟಿ ಕೊಡೊಕೆ ಸಾಧ್ಯವಿಲ್ಲ.
ಈಗ ಹೇಗೆ ಒದ್ದಾಡುತ್ತಿದ್ದಾರೆ ಎಲ್ಲರೂ. ಯಾವ ಸರ್ಕಾರ ಬಂದ್ರೂ ಇದು ಮಾಡಲು ಆಗುವುದಿಲ್ಲ. ಹಾಗಿದ್ದಿದ್ರೇ ಬೊಮ್ಮಾಯಿ ಅವರು ಕೊಡ್ತಿದ್ರೂ. ಒಂದು ರೀತಿ ಕರ್ನಾಟಕದಲ್ಲಿ ಅರಾಜಕತೆ ಶುರುವಾಗಿದೆ. ಪಾಕಿಸ್ತಾನದ ಧ್ವಜ ಹಾರಾಡುತ್ತಿವೆ, ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಆಗ್ತಿವೆ. ನಾವು ಎಲ್ಲದಕ್ಕೂ ತಯಾರಾಗಬೇಕು ಇಲ್ಲವಾದ್ರೇ ಮನೆಗೆ ಬಂದು ಹೊಡೆಯುತ್ತಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ, ಡಿಕೆಶಿ ಇಬ್ಬರ ನೇತೃತ್ವದ ಸರ್ಕಾರ ಐದು ವರ್ಷ ಹೋಗುವುದಿಲ್ಲ. ಇದು ಐದು ವರ್ಷ ನಡೆಯುವ ಸರ್ಕಾರ ಅಲ್ಲ. ಲೋಕಸಭಾ ಚುನಾವಣೆ ಮುನ್ನ, ಇಲ್ಲಾ ಆದ ಬಳಿಕ ಆಕ್ಸಿಡೆಂಟ್ ಆಗುತ್ತೆ. ಅಷ್ಟರಲ್ಲಿ ಇಬ್ಬರು ಮೆಟ್ಟು ಮೆಟ್ಟಿನಿಂದ ಹೊಡೆದಾಡಿಕೊಳ್ತಾರೆ. ಯಡಿಯೂರಪ್ಪ, ಬೊಮ್ಮಾಯಿ ಮನೆಗೆ ಸೌಜನ್ಯ ಭೇಟಿ ಅಂತಾರೆ. ಇವರು ಸೌಜನ್ಯ ಭೇಟಿ ಕೊಡ್ತಿಲ್ಲ ಸೋನಿಯಾ ಗಾಂಧಿಗೆ ಅಂಜಿಸುವ ಕೆಲಸ ಮಾಡ್ತಾರೆ. ಬೊಮ್ಮಾಯಿಯವರೇ ಅವರನ್ನ ನೀವು ಮನೆ ವರೆಗೂ ಬಿಟ್ಟುಕೊಳ್ಳಬೇಡಿ. ನಾವು ವಿರೋಧ ಪಕ್ಷದವರ ಮನೆಗೆ ಹೋಗುವುದಿಲ್ಲ ಅಂತಾರೆ. ಅದೇ ರೀತಿ ನಾವು ಅವರ ಮನೆಗೆ ಹೋಗುವುದಿಲ್ಲಾ ಅಂತಾ ಹೇಳಿ. ಅವರನ್ನ ಸ್ವಾಗತಿಸಿಕೊಂಡ್ರೇ ನಮ್ಮ ಕಾರ್ಯಕರ್ತರು ಮಲಗಿ ಬಿಡ್ತಾರೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಹಲಕಟಗಿರಿ ಮಾಡೊದಿದ್ರೇ ಅಲ್ಲಿಗೆ ಹೋಗಿ. ನಾವು ಯಾರು ಜಗಳ ಮಾಡುತ್ತಿಲ್ಲ, ಪಾರ್ಟಿ ನಿರ್ಣಯ ಮಾಡಿದವರ ಪರ ಕೆಲಸ ಮಾಡಿ. ಮೂರು ತಿಂಗಳಲ್ಲಿ ಗ್ಯಾರಂಟಿ ಬಣ್ಣ ಬಯಲು ಆಗಲಿದೆ. ಸಿದ್ದರಾಮಯ್ಯನವರು ಎನ್ ಹೇಳಿದ್ರು ಅದನ್ನ ಹೊರ ತೆಗೆಯುತ್ತೇವೆ. ನಾವು ಗಟ್ಟಿ ಇದ್ದೇವೆ ದನ ಕಾಯುತ್ತಿಲ್ಲ ಆರ್ಥಿಕತೆ ಬಗ್ಗೆಯೂ ಗೊತ್ತಿದೆ ಎಂದ ವಾಗ್ದಾಳಿ ನಡೆಸಿದರು.