ಬೆಂಗಳೂರು : ಶಾಸಕರಲ್ಲಿ ಯಾವ ಅಸಮಾಧಾನವಿದೆ ಲೆಟರ್ ಯಾರು ಬರೆದಿದ್ದಾರೆ, ಏನಿದೆ ಎಂದು ಸಭೆ ಕರೆಯುವಂತೆ ಹೇಳಿಹೇಳಿದ್ದೆವು. ಅದಕ್ಕೆ ಸಿಎಂ ಸಭೆ ಕರೆದಿದ್ದಾರೆ ಆಪತ್ರವೇ ಅದಲ್ಲ. ಈಗ ಲೆಟರ್ ಕೊಟ್ಟಿದ್ದಾರೆ ಅಂತ ಫೇಕ್ ಮಾಡಿದ್ದಾರೆ.ನಮ್ ಲೆಟರೇ ಬೇರೆ, ಸೋಷಿಯಲ್ ಮೀಡಿಯಾದಲ್ಲಿ ಬಂದಿದ್ದೇ ಬೇರೆ ಮೊನ್ನೆ ಇನ್ನ ಬಜೆಟ್ ಮಾಸಿದ್ದಾರೆ ಬಜೆಟ್ ಅನುಮೋದನೆ ಈಗ ಆಗಿದೆ. ಅನುದಾನದ ಪ್ರಶ್ನೆಯೇ ಬರುವುದಿಲ್ಲವಲ್ಲ.
54 ಸಾವಿರ ಕೋಟಿ ಹಣ ಇಟ್ಟಿದ್ದಾರೆ, ಹಿಂದಿದ್ದ ಸರ್ಕಾರ ಎರಡೂವರೆ ಲಕ್ಷ ಕೋಟಿ ಕ್ರಿಯಾ ಯೋಜನೆ ಬಿಟ್ಟಿತ್ತು ಯಾರಾದರು ಅನುದಾನ ಬಂದಿಲ್ಲ ಅಂತ ಹೇಳಿದ್ದಾರಾ, ಟ್ರಾನ್ಸವರ್ ವಿಚಾರದಲ್ಲಿ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಶಾಸಕರು ಏನು ಹೇಳ್ತಾರೆ ಮಾಡಿಕೊಡಿ ಎಂದು ಯಾವ ಶಾಸಕರು ನಿಮಗೆ ದೂರು ಕೊಟ್ಟಿದ್ದಾರೆ ಹೇಳಿ ಸಚಿವರ ದುರಹಂಕಾರ ಅಂತ ಯಾರು ಹೇಳಿದರು. ಗ್ಯಾರೆಂಟಿ ನಾವು ಪಾಸ್ ಮಾಡಿಲ್ವಾ ಬಜೆಟ್ ಒಪ್ಪಿಗೆ ಆಗಿದೆಯಲ್ಲ ಗ್ಯಾರೆಂಟಿ ಅನುಷ್ಠಾನಕ್ಕೆ ಬಂದಿದೆಯಲ್ಲ, ನಮಗೆ ಯಾವುದೇ ಅಸಮಾಧಾನವಿಲ್ಲ.
ಶಾಸಕರಲ್ಲಿ ಯಾವ ಅಸಮಾಧಾನವಿದೆ..?
ಹರಿಪ್ರಸಾದ್ ಅಸಮಾಧಾನ ವಿಚಾರದಲ್ಲಿ ಎಲ್ಲೂ ವ್ಯಕ್ತಪಡಿಸಿಲ್ಲ ಸಿಎಂ ಬದಲಾಯಿಸ್ತೇವೆ ಅಂತ ಎಲ್ಲಿ ಹೇಳಿದರು, ಅವರು ಎಲ್ಲೂ ಹೇಳಿಲ್ಲ,ನೀವೇ ಹಾಕಿಬಿಟ್ಟರಿ ಅವರಿಗೆ ಸ್ವಲ್ಪ ಸಣ್ಣ ನೋವು ಇರಬಹುದು ಸಚಿವ ಸ್ಥಾನ ಸಿಗಲಿಲ್ಲ ಅಂತ ಇರಬಹುದು. ಆದರೆ ಎಲ್ಲೂ ಅಸಮಾಧಾನ ಮಾಡಿಲ್ವಲ್ಲಾ? ಶಿವಲಿಂಗೇಗೌಡರಿಗೆ ಅಸಮಾಧಾನ ಇದ್ಯಾ ಎಂಬ ವಿಚಾರಕ್ಕೆ ಸಚಿವ ಸ್ಥಾನ ಸಿಗದ ಅಸಮಾಧಾನವಿಲ್ಲ ಎಂಟು ದಿನ ನನಗೂ ಅಸಮಾಧಾನವಿತ್ತು ಆದರೆ ಈಗ ಯಾವ ಅಸಮಾಧಾನವಿಲ್ಲ ಸಿದ್ದರಾಮಯ್ಯ ಆವರು ಶಿವಲಿಂಗೇಗೌಡರನ್ನ ಸಚಿವರನ್ನ ಮಾಡ್ತೇವೆ ಅಂದಿದ್ದಾರೆ ಕಾಯೋಣ ಅವರು ಕೊಡುವವರೆಗೆ ಎರಡೂವರೆ ವರ್ಷವೋ, ಮೂರು ವರ್ಷವೋ ಒಂದೂವರೆ ವರ್ಷವೋ ಕಾಯೋಣ ಕೊಡ್ತೇವೆ ಅಂತ ಅವರೇ ಹೇಳಿದ್ದಾರೆ.