ಎಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೋ ಅಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇನೆ. ಯಾರನ್ನೋ ಸೋಲಿಸಲು ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು KRP ಪಕ್ಷ ಸ್ಥಾಪಕ ಜನಾರ್ದನ ರೆಡ್ಡಿ (JANARDHAN REDDY)ಹೇಳಿದ್ದಾರೆ.
ಆನೆಗುಂದಿಯಲ್ಲಿ ಮಾತನಾಡಿದ ಅವರು, ಸಹೋದರ ಇರಲಿ ಯಾರೆ ಇರಲಿ ನಮ್ಮ ಪಕ್ಷದಿಂದ ಅಭ್ಯರ್ಥಿ ಹಾಕುತ್ತೇನೆ. ರಾಜಕೀಯದಲ್ಲಿ ನಾನೆಂದು ಸಂಬಂಧಗಳನ್ನ ದುರುಪಯೋಗ ಮಾಡಿಕೊಂಡಿಲ್ಲ. ನಂಗೆ ವ್ಯಕ್ತಿ ಮುಖ್ಯ ಅಲ್ಲ. ನಮ್ಮ ನಿರ್ಧಾರ ಅಚಲ, ನಾನು ಈಗಾಗಲೇ ಹೇಳಿದ್ದೇನೆ. ನಾನು ಯಾವ ಪಕ್ಷದ ನಾಯಕರ ಬಗ್ಗೆಯೂ ಮಾತನಾಡುವುದಿಲ್ಲ. 12 ವರ್ಷ ವನವಾಸ, ಹಿಂಸೆ ಅನುಭವಿಸಿ ಉದಯವಾಗಿರೋ ಪಕ್ಷ ಇದು. ಯಾಕೆ ಬೇರೆಯವರ ಬಗ್ಗೆ ಮಾತನಾಡಬೇಕು. ಇನ್ನೊಂದು ವಾರದಲ್ಲಿ ನಮ್ಮ ಪಕ್ಷದ ಪ್ರಣಾಳಿಕೆ ರೆಡಿಯಾಗುತ್ತದೆ. ಎಲ್ಲೆಲ್ಲಿ ಕ್ಯಾಂಡಿಡೇಟ್ ಹಾಕಬೇಕು ಎನ್ನೋದನ್ನ ಸದ್ಯದಲ್ಲಿಯೇ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ರು. ಇದನ್ನು ಓದಿ :-ಈಶ್ವರಪ್ಪ ಬಾಯಿ ಬಿಟ್ಟರೆ ಸಾಕು ಮನುಷ್ಯನ ನೀಚ ಸಂಸ್ಕಾರ ಆಚೆಗೆ ಬರುತ್ತದೆ – ಕಾಂಗ್ರೆಸ್ ಟ್ವೀಟ್
ನನ್ನ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಹೆದರಿಸುತ್ತಿದ್ದಾರೆ. ನಾನು ಯಾರಿಗೂ ಹೆದರಲ್ಲ, ಯಾರಿಗೂ ಬಗ್ಗಲ್ಲ. ಗಂಡುಮೆಟ್ಟಿದ ನಾಡಿನಲ್ಲಿ ಹುಟ್ಟಿದವನು ನಾನು. ಯಾರು ಏನು ಬೇಕಾದರೂ ಹೇಳಲಿ, ನೀವು ತಲೆಕೆಡಿಸಿಕೊಳ್ಳಬೇಡಿ. ನಾನು ನನ್ನ ಗುರಿಯನ್ನೇ ಮುಟ್ಟೇ ಮುಟ್ಟುತ್ತೇನೆ. ಅಂಜನಾದ್ರಿ ಅಭಿವೃದ್ಧಿಗೆ 5 ಸಾವಿರ ಕೋಟಿ ಯೋಜನೆ ಸಿದ್ಧಪಡಿಸಿದ್ದೇನೆ. ಇಡೀ ಜಗತ್ತೆ ನಮ್ಮ ಕಡೆ ನೋಡಬೇಕು ಹಾಗೇ ಮಾಡುತ್ತೇನೆ.
ಗಂಗಾವತಿ(GANGAVATHI) ಯಲ್ಲಿ 200 ಬೆಡ್ ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡ್ತಿನಿ. ಸ್ಲಂ ಇಲ್ಲದ ರೀತಿಯಾಗಿ ಗಂಗಾವತಿಯನ್ನ ನಿರ್ಮಾಣ ಮಾಡ್ತೇನೆ. ರಾಜ್ಯದ ೧೦-೧೫ ಜಿಲ್ಲೆಗಳ ಜನರು ನಮ್ಮ ಪಕ್ಷ ಸೇರ್ಪಡೆಯಾಗ್ತಿದ್ದಾರೆ. ನಿಮ್ಮ ಶಕ್ತಿ ನಂಗೆ ಆನೆ ಬಲ ತರುತ್ತಿದೆ. ನೀವು ನಿಮ್ಮ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಬೇಕಿಲ್ಲ. ನಂಗೆ ಅಧಿಕಾರ ಕೊಡಿ ಮಂತ್ರಿ, ಶಾಸಕರನ್ನ ನಿಮ್ಮ ಬೀದಿ ಬೀದಿಗೆ ಬರುವಂತೆ ಮಾಡ್ತೇನೆ. ಸರ್ಕಾರವನ್ನೆ ನಿಮ್ಮ ಮನೆ ಬಾಗಿಲಿಗೆ ತರುತ್ತೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನೋಡಿದ್ರೆ ನಾನು ಗೆದ್ದು ಬಿಟ್ಟಿದ್ದೇನೆ ಎನ್ನೋ ನಂಬಿಕೆ ಬಂದಿದೆ ಎಂದು ತಿಳಿಸಿದ್ರು.
ಇದನ್ನು ಓದಿ :- ಪ್ರಧಾನಿ ಮೋದಿ ವಿರುದ್ಧ BBC ನಿರ್ಮಿಸಿರುವ ಸಾಕ್ಷ್ಯಚಿತ್ರಕ್ಕೆ ರಷ್ಯಾ ಆಕ್ರೋಶ…!