ರಾಜ್ಯದಲ್ಲಿ 32 ಪ್ರಾಧಿಕಾರಗಳಿವೆ ನಮ್ಮ ಇಲಾಖೆಯಲ್ಲಿ ಪ್ರಧಾಕಾರಗಳು ಇವೆ ಈ ಅವುಗಳನ್ನ ಕಾರ್ಯಕರ್ತರಿಗೆ ಕೊಡುವ ಕುರಿತು ಚರ್ಚೆ ಮಾಡಿದ್ದೇವೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಸದಾಶಿವನಗರದಲ್ಲಿ ಡಿಸಿಎಂ ಭೇಟಿ ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ 32 ಪ್ರಾಧಿಕಾರ ಇದೆ. ಅಧ್ಯಕ್ಷರು, ಮೆಂಬರ್ ಗಳನ್ನ ನೇಮಕ ಮಾಡಬೇಕು. ಶಾಸಕರ ಜೊತೆ ಮಾತಾಡಿ ಸದಸ್ಯರ ನೇಮಕ ಮಾಡುತ್ತೇವೆ. 400-500 ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕು. ಡಿಸಿಎಂ , ಸಿಎಂ ಸಲಹೆ ಕೊಟ್ಟಿದ್ದಾರೆ. ಲೋಕಸಭೆ ಎಲೆಕ್ಷನ್ ಹಿನ್ನೆಲೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಎಂಎಲ್ ಎಗಳ ಜೊತೆ ಕಾರ್ಯಕರ್ತರಿಗೂ ಅವಕಾಶ ಸಿಗಬೇಕು. ಪಕ್ಷದ ಮುಖಂಡರು, ಸೀನಿಯರ್ ಗಳಿಗೆ ಅವಕಾಶ ಮಾಡಿಕೊಡಬೇಕು. ವಾರ, ಹದಿನೈದು ದಿನಗಳಲ್ಲಿ ಪಟ್ಟಿ ರೆಡಿ ಮಾಡ್ತೀವಿ. ನೇಮಕಾತಿಯನ್ನ ಸಿಎಂ, ಡಿಸಿಎಂ ಮಾಡುತ್ತಾರೆ ಎಂದರು.
ರೈತರು ಬರಗಾಲಕ್ಕೆ ಕಾಯುತ್ತಿರುತ್ತಾರೆ ಎಂಬ ಶಿವಾನಂದ ಪಾಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಸಚಿವರು ಫ್ಲೋನಲ್ಲಿ ಹೇಳಿದ್ದಾರಷ್ಟೇ. ಅವರೂ ರೈತ ಕುಟುಂಬದಿಂದ ಬಂದೋರೇ. ಮಿಸ್ಟೇಕ್ ಆಗಿ ಮಾತಾಡಿರಬೇಕು. ರೈತರು ದೇಶದ ಬೆನ್ನುಲುಬು, ನಾವೆಲ್ಲಾ ರೈತ ಕುಂಟುಬದಿಂದಲೇ ಬಂದೋರೆ ಎಂದು ಹೇಳಿದರು. ಇನ್ನೂ ನೀರಿನ ಬಿಲ್ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ 10-12 ವರ್ಷದಿಂದ ದರ ಏರಿಕೆ ಮಾಡಿಲ್ಲ. ಕರೆಂಟ್ ಬಿಲ್ ಹೆಚ್ಚಾಗಿದೆ. ಅದನ್ನೆಲ್ಲಾ ಬ್ಯಾಲೆನ್ಸ್ ಮಾಡಬೇಕು. ಸ್ವಲ್ಪ ಜಾಸ್ತಿ ಮಾಡಿದ್ದಾರೆ ಅಷ್ಟೇ.ಬೇರೆ ರಾಜ್ಯದಲ್ಲಿ ನೋಡಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ. ಸಾರ್ವಜನಿಕರಿಗೆ ಹೊರೆ ಆಗದ ಹಾಗೇ ಮಾಡಿದ್ದಾರೆ ಎಂದರು.
ವಿದ್ಯುತ್ ದರ ಏರಿಕೆ ವಿಚಾರವಾಗಿ ಮಾತನಾಡಿ ಕರೆಂಟ್ ದರ ಏರಿಕೆ ರೆಗ್ಯುಲೇಟರಿ ಬೋರ್ಡ್ ಮಾಡುತ್ತೆ ಅಂತಿಮವಾಗಿ ಸಿಎಂ ತೀರ್ಮಾನ ಮಾಡ್ತಾರೆ ಎಂದರು. ಅಹಿಂದ ಸಮಾವೇಶ ವಿಚಾರವಾಗಿ ಮಾತನಾಡಿ ಅಹಿಂದ ಸಮಾವೇಶ ಸರ್ಕಾರದಿಂದ ಮಾಡ್ತಿಲ್ಲ. ನಮ್ಮ ಸಮುದಾಯಗಳೆಲ್ಲಾ ಸೇರಿ ಮಾಡ್ತಿರೋದು. ಅವರವರು ಬೇಡಿಕೆಗಳನ್ನಿಟ್ಟುಕೊಂಡು ಮಾಡ್ತಾರೆ. ಒಕ್ಕಲಿಗ, ಲಿಂಗಾಯತರು ಎಲ್ಲಾರು ಮಾಡಬಹುದು. ಜಾತಿಗಣತಿ ಮಾಡೋದು ಆರ್ಥಿಕ, ಸಾಮಾಜಿಕ ಪರಿಸ್ಥಿತಿ ತಿಳಿಯಲು. ಜನಸಂಖ್ಯೆ ಎಷ್ಟಿದೆ ಅಂತಾ ತಿಳಿದುಕೊಳ್ಳೋಕೆ ಅಲ್ಲ. ಮೊದಲು ರಿಪೋರ್ಟ್ ಬರಲಿ, ಆಮೇಲೆ ನೋಡೋಣ ಎಂದು ಜಾತಿಗಣತಿ ಸಮೀಕ್ಷೆ ವಿರೋಧಿಗಳಿಗೆ ಬೈರತಿ ಸುರೇಶ್ ತಿರುಗೇಟು ನೀಡಿದರು.
ವರದಿ : ಬಸವರಾಜ ಹೂಗಾರ