ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆಂಬ ವದಂತಿಗೆ ಸಚಿವ ಎನ್ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆಂಬ ವದಂತಿಗೆ ಪ್ರತಿಕ್ರಿಯಿಸಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಎಲ್ಲಿಂದಾದರೂ ಸ್ಪರ್ಧಿಸಲಿ ಅದು ತಮ್ಮ ಪಕ್ಷಕ್ಕೆ ಸಂಬಂಧಪಟ್ಟದಲ್ಲ, ಮತ್ತು ಅವರು ಎಲ್ಲಿಂದ ಸ್ಪರ್ಧಿಸಬೇಕೆಂದು ಹೇಳುವ ಅವಶ್ಯಕತೆ ತನಗಿಲ್ಲ ಎಂದುಸಚಿವ ಎನ್ ಚಲುವರಾಯಸ್ವಾಮಿ ಕಿಡಕಾರಿದ್ದಾರೆ
ಅಷ್ಟೇ ಅಲ್ಲದೇ ರಾಮ ಮಂದಿರ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ, ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಅವರು ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನಿಸುವುದಿರೋದು ರಾಜಕಾರಣವಲ್ಲದೆ ಮತ್ತೇನು ಎಂದು ಪ್ರಶ್ನೆ ಮಾಡಿದ್ದಾರೆ.
ರಾಮ ಕೇವಲ ಬಿಜೆಪಿಯವರಿಗೆ ಮಾತ್ರ ಮೀಸಲೇ? ಅವರಿಗಿಂತ ಜಾಸ್ತಿ ಕಾಂಗ್ರೆಸ್ ಪಕ್ಷದವರುರಾಮನನ್ನು ಪೂಜಿಸುತ್ತಾರೆ, ಆರಾಧನೆ ಮಾಡುತ್ತಾರೆ. ರಾಜಕಾರಣ ಮಾಡಲು ಮತ್ತು ಹಿಂದೂಗಳ ವೋಟು ಸೆಳೆಯಲು ಮಾತ್ರ ಬಿಜೆಪಿ ರಾಮನಾಮ ಜಪಿಸುತ್ತದೆ, ಅಲ್ಲದೇ ಅವರಿಗೆ ಜನರ ಮನವೋಲಿಸಲು ಬಿಜೆಪಿ ನಾಯಕರಿಗೆ ಅದೊಂದು ದಾರಿ ಎಂದು ಕಿಡಿಕಾರಿದ್ದಾರೆ.
ಬರ ಪರಿಹಾರ ನೀಡುವ ಬಗ್ಗೆ ಪಿಎಂ, ಗೃಹ ಸಚಿವರನ್ನ ಭೇಟಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಬೇಗ ಹಣ ಬಿಡುಗಡೆ ಮಾಡ್ತೀವಿ ಅಂತಾ ಹೇಳಿದ್ರು ಅದಲ್ಲದೇ ಕೃಷ್ಣಭೈರೇಗೌಡ್ರು ನಾನು ಮಾತಾಡಿ ಸಿಎಂನ ಭೇಟಿ ಮಾಡ್ತೀವಿ
ಬರ ಪರಿಹಾರ ನಿಧಿ ಮತ್ತು ರಾಜ್ಯಕ್ಕೆ ನೀಡುವ ಅನುದಾನಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.