ಬೆಂಗಳೂರು : ಆಯನೂರು ಸೀಸನಲ್ ಪಾಲಿಟಿಕ್ಸ್ ಮಾಡ್ತಾರೆ ಎಂಬ ವಿಚಾರ ನನಗೆ ಗೊತ್ತಿಲ್ಲಾ ಅವರ ಕಾಮೆಂಟ್ಗೆ ಸಿಲ್ಲಿ ಮಾತುಗಳಿಗೆ ನಾನು ರಿಯಾಕ್ಟ್ ಮಾಡಲ್ಲಾ ಎಂದು ಆಯನೂರು ಮಂಜುನಾಥ್ ಉತ್ತರಿಸಿದ್ದಾರೆ.
ಮಾಧ್ಯಮದೊಂದಿಗೆ ಆಯನೂರು ಮಂಜುನಾಥ್ ಮಾತನಾಡಿ, ನಾನು ನನ್ನ ಸ್ನೇಹಿತರು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದೇವೆ. ಯಾವುದೇ ಕಂಡಿಷನ್ ಇಲ್ಲದೆ ಅನ್ ಕಂಡಿಷನ್ ಆಗಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿದ್ದೇವೆ. ಬರುವ ದಿನಗಳಲ್ಲಿ ಜಿಲ್ಲಾ ತಾಲ್ಲೂಕು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ನಮ್ಮ ಶಕ್ತಿ ವಿನಿಯೋಗ ಮಾಡಿ ತೊಡಗಿಸಿಕೊಳ್ಳುವೆ. ಮುಂದಿನ ದಿನಗಳಲ್ಲಿ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆ ಬರ್ತಿವೆ. ನಾನು ಅದರ ಸದಸ್ಯನಾಗಿದ್ದೆ ಪಕ್ಷ ಏನ್ ತೀರ್ಮಾನ ಮಾಡುತ್ತೆ ನೋಡೋಣ.
ನನಗೂ ಕೊಟ್ರು ಸಂತೋಷ. ಬೇರೆಯವರಿಗು ಕೊಟ್ರು ಸಂತೋಷದಿಂದ ಕೆಲಸ ಮಾಡುತ್ತೇನೆ ಇನ್ನೂ ಆಯನೂರು ಸೀಸನಲ್ ಪಾಲಿಟಿಕ್ಸ್ ಮಾಡ್ತಾರೆ ಎಂಬ ವಿಚಾರ ನನಗೆ ಗೊತ್ತಿಲ್ಲಾ ಅವರ ಕಾಮೆಂಟ್ಗೆ ಸಿಲ್ಲಿ ಮಾತುಗಳಿಗೆ ನಾನು ರಿಯಾಕ್ಟ್ ಮಾಡಲ್ಲಾ ಎಂದು ಆಯನೂರು ಮಂಜುನಾಥ್ ಖಡಕ್ ಆಗಿ ಉತ್ತರಿಸಿದ್ದಾರೆ.