ಬೆಂಗಳೂರು : ಉಡುಪಿಯಲ್ಲಿ ವಿದ್ಯಾರ್ಥಿನಿ ವಿಡಿಯೋ ಚಿತ್ರೀಕರಣ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಅಂದ್ರೆ ರಾಜ್ಯಾದ್ಯಂತ ಹೊರಾಟ ಮಾಡ್ತಿವಿ ಎಂದು ಎಮ್ಎಲ್‌ಸಿ ತೇಜಸ್ವಿನಿ ಕಿಡಿಕಾರಿದ್ದಾರೆ
ಮಾಧ್ಯಮಗಳೊಂದಿಗೆ ಮಾತನಾಡಿ, ಉಡುಪಿಯಲ್ಲಿ ವಿದ್ಯಾರ್ಥಿನಿ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ಗಮನಿಸಿದ್ರೆ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ ಎಂದು ತೋರುತ್ತದೆ. ಅಲ್ಲದೇ ಮಹಿಳೆಯರಿಗೆ ರಕ್ಷಣೆ ಕೊಡಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೋತಿದ್ದಾರೆ ಕಿಡಿಕಾರಿದ್ದಾರೆ.
ಉಡುಪಿಯ ಪ್ರಕರಣದಲ್ಲಿ ಯಾವುದೇ ಜಾತಿ ಬೇಧ ಇಲ್ಲ. ಮಹಿಳೆಯರು ಕೆಲಸ ಮಾಡುವಾಗ ಅವರಿಗೆ ರಕ್ಷಣೆ ಕೊಡಬೇಕು. ಕಾಲೇಜಿನಲ್ಲಿ ಈ ಘಟನೆ ನಡೆಸಿದ್ದು ವಯಸ್ಕ ಮಕ್ಕಳು. ಅವರಿಗೆ ಯಾವುದನ್ನ ಜೋಕ್ಸ್ ಮಾಡಬೇಕು ಅನ್ನೋದು ಗೊತ್ತಿದೆ. ಆಸಿಫಾ ಆಲಿಯಾ ಸ್ನೇಹಿತರು ಈ ವಿಡಿಯೋ ಮಾಡಿದ್ದಾರೆ. ಅಪರಾಧ ಮಾಡಿದವರ ಮೇಲೆ ಕ್ರಮ ಕೈಗೊಂಡಿಲ್ಲ, ಕಾಲೇಜಿನವರು ಒಪ್ಪಿಕೊಂಡಿದ್ದಾರೆ ಅಲ್ಲದೇ ಮಕ್ಕಳು ಒಪ್ಪಿಕೊಂಡಿದ್ದಾರೆ. ಕಳ್ಳಪೊಲೀಸ್ ಆಟ ಆಡೋಕೆ ಆಗೊಲ್ಲಾ ಕ್ರಮ ಕೈಗೊಳ್ಳಲಿಲ್ಲಾ ಅಂದ್ರೆ ರಾಜ್ಯಾದ್ಯಂತ ಹೊರಾಟ ಮಾಡ್ತಿವಿ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಈ ಘಟನೆಗೆ ಸೂಕ್ತ ಏಜೆನ್ಸಿಗೆ ತನಿಖೆ ವಹಿಸಬೇಕು ಆಗ್ರಹಿಸಿದ್ದಾರೆ.