ಬೆಂಗಳೂರು : ಸಿಎಂ ಇಬ್ರಾಹಿಂ ಅವರು ಪಕ್ಷಕ್ಕೆ ಬಂದ್ರೆ ಖಂಡಿತ ಸ್ವಾಗತ ಮಾಡ್ತೀವಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಿಎಂ ಇಬ್ರಾಹಿಂ ಅಸಮಧಾನ ಕುರಿತು ರವೀಂದ್ರ ಕಲಾ ಕ್ಷೇತ್ರದಲ್ಲಿ ಮಾತನಾಡಿದ ಅವರು ಅವರು ಹಿರಿಯ ಮುತ್ಸದಿ ರಾಜಕಾರಣಿ, ಅವರ ಸಮುದಾಯದ ಹಿರಿಯ ನಾಯಕರು. ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳೋದು ಬಿಡೋದಕ್ಕೆ ನಾನು ಪಕ್ಷದ ಅಧ್ಯಕ್ಷೆಯೂ ಅಲ್ಲ ವರ್ಕಿಂಗ್ ಪ್ರೆಸೆಂಡೆಂಟ್ ಸಹ ಅಲ್ಲ. ಅದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದೆ. ಪಕ್ಷಕ್ಕೆ ಬಂದ್ರೆ ಖಂಡಿತ ಸ್ವಾಗತ ಮಾಡ್ತೀವಿ. ನಮ್ಮ ಪಕ್ಷದ ಸಿದ್ದಂತವನ್ನ ಅರ್ಥ ಮಾಡಿಕೊಂಡು ಅಳವಡಿಸಿಕೊಂಡು ಪಕ್ಷಕ್ಕೆ ಬರ್ತಿನಿ ಅಂದ್ರೆ ಖಂಡಿತ ಸ್ವಾಗತ ಮಾಡ್ತೀನಿ ಎಂದರು.
ಲಿಂಗಾಯತ ಅಧಿಕಾರಿಗಳ ಕಡಗಣೆನೆ ವಿಚಾರವಾಗಿ ಮಾತನಾಡಿ ಸರ್ಕಾರದ ಜನಪರ ಕೆಲಸ ಮಾಡ್ತಿದೆ..ಗ್ಯಾರಂಟಿ ಅನುಷ್ಠಾನ ಮಾಡುವ ಕೆಲಸ ಮಾಡ್ತಿದೆ. ಕಾವೇರಿ ವಿಚಾರದ ಈ ಸಂದರ್ಭದಲ್ಲಿ ಈ ವಿಚಾರ ಡೈವರ್ಟ್ ಮಾಡೋಕೆ ಇಷ್ಟುಪಡೋದಿಲ್ಲ. ಮಾನ್ಯ ಶಾಮೂನುರು ಶಿವಶಂಕರಪ್ಪಾಜಿಯವರು ನಮ್ ಸಮುದಾಯದ ಹಿರಿಯರು, ಹಿರಿಯ
ಕಾಂಗ್ರೆಸ್ ಪಕ್ಷದ ಮುಖಂಡರು. ಅವರ ಭಾವನೆಗಳನ್ನ ನಾವು ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ಸಮುದಾಯದಕ್ಕೆ ಆ ರೀತಿ ಏನಾದ್ರು ಆಗಿದ್ರೆ ನಾವು ಕೂತು ಚರ್ಚೆ ಮಾಡ್ತೀವಿ. ಯಾಕೆಂದರೆ ಕ್ಯಾಬಿನೆಟ್ ನಲ್ಲಿ 7 ಲಿಂಗಾಯತ ಮಂತ್ರಿಗಳಿದ್ದೇವೆ ಎಲ್ಲರೂ ಸಮರ್ಥರಿದ್ದೇವೆ.
ಹಿರಿಯರು ಹೇಳಿರೋದನ್ನ ಖಂಡಿತ ವಿಚಾರ ಮಾಡ್ತೀವಿ. ಸಂಬಂಧಪಟ್ಟವರ ಜೊತೆ ಮಾತನಾಡ್ತೀವಿ. ಅವರು ಪಕ್ಷದ ವಿಚಾರವಾಗಿ ಮಾತನಾಡಿಲ್ಲ. ಸಮಾಜ ಸರಿಪಡಿಸುವ ಮಾತನಾಡಿದ್ದಾರೆ ,ನನ್ನ ಗಮನಕ್ಕೂ ಬಂದಿದೆ. ನನ್ನ ಜೊತೆಯೂ ಮಾತನಾಡಿದ್ದಾರೆ. 7 ಜನ ಮಂತ್ರಿ ಕೂತು ಮಾತನಾಡ್ತೀವಿ. ಆ ರೀತಿ ಆಗಿದ್ರೆ ಸಿಎಂ ಗಮನಕ್ಕೂ ತರ್ತಿವಿ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ