ಬೆಂಗಳೂರು : ಬಿಜೆಪಿಯ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ನಮ್ಮ ಬಿಜೆಪಿ ಪಕ್ಷದ ಹೈಕಮಾಂಡ್ ನಲ್ಲಿ ಕಾಂಗ್ರೆಸ್ನ 50 ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆಗೆ ಸಚಿವ ಎಂಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಐವತ್ತು ಜನ ಹೈಕಮಾಂಡ್ ಸಂಪರ್ಕದಲ್ಲಿ ಇದ್ದಾರೆ ಎಂಬ ಬಿಜೆಪಿಯ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹೇಳಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ತಿರುಗೇಟು ನೀಡಿದರು. ಕಾಂಗ್ರೆಸ್ ಪಕ್ಷದ ಐವರು ಶಾಸಕರು ಕೂಡ ಬಿಜೆಪಿಗೆ ಹೋಗುವುದಿಲ್ಲ. ನಿರಾಣಿ ಸೋತು ಸುಣ್ಣವಾಗಿದ್ದಾರೆ ಅವರಿಗ ಶಾಸಕರು ಅಲ್ಲ ಎಂದರು.
ಬಿಜೆಪಿಯಿಂದಲೇ ನಮ್ಮ ಪಕ್ಷಕ್ಕೆ 20 ರಿಂದ 25 ಶಾಸಕರು ಬರುತ್ತಾರೆ. 65 ರಿಂದ 70 ಶಾಸಕರನ್ನು ಖರೀದಿ ಮಾಡಲು ಸುಲಭವಿದೆಯಾ? ನಮ್ಮ ಒಬ್ಬ ಶಾಸಕನ ಟಚ್ ಮಾಡಿದ್ರೆ ಬಿಜೆಪಿಯಿಂದ 25 ಶಾಸಕರು ಬರುತ್ತಾರೆ. ಆಗ ನಾವು 150 ರಿಂದ 160ಕ್ಕೂ ಹೆಚ್ಚು ಶಾಸಕರಾಗಲಿದ್ದೇವೆ ಎಂದು ಬೆಂಗಳೂರಿನಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು.