ಬೆಂಗಳೂರು : ಜನವರಿ 1 ರಿಂದ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನಕ್ಕೆ ಜೀನ್ಸ್, ಸ್ಕರ್ಟ್ ತೊಟ್ಟು ಆಗಮಿಸಿದ್ರೆ, ದೇಗುಲಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಸೂಚನೆ ನೀಡಿದೆ.
ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಕೆಲವರು ಅಸಭ್ಯ ವಸ್ತ್ರಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆ ಡ್ರೆಸ್ ಕೋಡ್ ಜಾರಿಗೆ ತಂದಿದ್ದು, ಧಾರ್ಮಿಕ ಭಾವನೆಗಳನ್ನು ಲೆಕ್ಕಿಸದೆ ದೇವಸ್ಥಾನಕ್ಕೆ ಭೇಟಿ ನೀಡಿ ಧಾರ್ಮಿಕ ಭಾವನೆಗೆ ತಕ್ಕೆ ತರುವುದು ಕಂಡು ಬಂದಿದೆ ಈ ನಿಟ್ಟಿನಲ್ಲಿ ಈ ಹೊಸ ನಿಯಮಗಳನ್ನು ದೇವಾಲಯದ ಆಡಳಿತ ಮಂಡಳಿ ನೀತಿ’ ಉಪಸಮಿತಿ ಸಭೆಯಲ್ಲಿ ಖಡಕ್ ಸೂಚನೆ ನೀಡಿದೆ.
ಸಮುದ್ರ ತೀರದಲ್ಲೋ, ಉದ್ಯಾನವನದಲ್ಲೋ ಅಡ್ಡಾಡುವ ಡ್ರೆಸ್‌ಗಳಾದ ಹರಿದ ಜೀನ್ಸ್ ಪ್ಯಾಂಟ್, ಸ್ಲೀವ್ ಲೆಸ್ ಡ್ರೆಸ್, ಹಾಫ್ ಪ್ಯಾಂಟ್ ಗಳನ್ನು ದೇಗುಲಕ್ಕೂ ಎಗ್ಗಿಲ್ಲದೇ ಹಾಕಿಕೊಂಡು ಬರುತ್ತಾರೆ ದೇಗುಲ ಎಂದಾಗ ಅದು ಮನರಂಜನಾ ಸ್ಥಳವಲ್ಲ ಅದು ಒಂದು ಧಾರ್ಮಿಕ ಕ್ಷೇತ್ರ ಈ ಕಾರಣದಿಂದ ಧಾರ್ಮಿಕ ಭಾವನೆ ಚ್ಯುತಿ ತರುವಂತಹ ಧರಿಸುಗಳನ್ನು ಹಾಕಿಕೊಂಡು ಬರುವನ್ನು ನಿರಾಕರಣೆ ಮಾಡಲಾಗಿದೆ ಈನಿಯಮವೂ ಜನವರಿ 1, 2024 ರಿಂದ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ ಡ್ರೆಸ್ ಕೋಡ್ ಅನ್ವಯವಾಗಲಿದೆ ಎಂದು ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ರಂಜನ್ ಕುಮಾರ್ ದಾಸ್ ಹೇಳಿದ್ದಾರೆ.
ಭಕ್ತರಿಗೆ ವಿಶೇಷ ಸೂಚನೆ : ಹಾಫ್ ಪ್ಯಾಂಟ್, ಶಾರ್ಟ್ಸ್, ಹರಿದ ಜೀನ್ಸ್, ಸ್ಕರ್ಟ್ ಮತ್ತು ಸ್ಲೀವ್‌ಲೆಸ್ ಡ್ರೆಸ್‌ಗಳನ್ನು ಧರಿಸಿದವರಿಗೆ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನಕ್ಕೆ ಪ್ರವೇಶವಿಲ್ಲ