ಬೆಂಗಳೂರು : ರಾಮನಗರ ಜಿಲ್ಲೆಮಾನ್ಯತೆ ರದ್ದು ಹಾಗೂ ಹುಲಿ ಉಗುರು ಪೆಂಡೆಂಟ್ ಧರಿಸಿದ ವಿಚಾರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದೊಂದಿಗೆ ಮಾಜಿ ಸಚಿವ ಡಾ ಸಿಎನ್ ಅಶ್ವತ್ಥ ನಾರಾಯಣ್ ಮಾತನಾಡಿ, ಡಿಕೆಶಿ ಅವ್ರು ಎಂಟು ಬಾರಿ ಕನಕಪುರ ಪ್ರತಿನಿಧಿಸಿದ್ದಾರೆ. ನಾಲ್ಕು ಬಾರಿ ಸಾತನೂರು ನಾಲ್ಕು ಬಾರಿ ಕನಕಪುರದಲ್ಲಿ ಪ್ರತಿನಿಧಿಸಿದ್ದಾರೆ. ಇಷ್ಟಾದ್ರೂ ನಿಮ್ಮ ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಇಷ್ಟು ವರ್ಷ ಇಲ್ಲದ ಪರಿಜ್ಞಾನ ಈಗ ಬಂತಾ?ಇದ್ದಕಿದ್ದಂತೇ ಇವಾಗ ಯಾಕೆ ಜ್ಞಾನೋದಯ ಆಯ್ತಾ ಎನ್ನುವ ಮೂಲಕ ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಕಣ್ಣು ಸ್ಕ್ವೇರ್ ಫೂಟ್ ಮೇಲೆ, ನಿಮ್ಮ ಹೆಸರೇ ಸ್ಕ್ವೇರ್ ಫೂಟ್, ನೀವು ಸ್ಕ್ವೇರ್ ಫೂಟ್ ಡಿಕೆಶಿ. ರಾಮನಗರ ಜಿಲ್ಲೆ ತೆಗೆಯಲು ಹೋಗ್ತಿದೀರಿ. ರಾಮನಗರಕ್ಕೆ ಹಲವರ ಕೊಡುಗೆ ಇದೆ ನೀವು ರಾಮದೇವರ ಬೆಟ್ಟಕ್ಕೆ ಒಂದು ಕಲ್ಲೂ ಎತ್ತಿಟ್ಟಿಲ್ಲ ನಿಮ್ಮ ಕೊಡುಗೆ ರಾಮನಗರಕ್ಕೆ ಏನೂ ಇಲ್ಲ. ಭೂಮಿ, ಹಣ ಅಂತ ನಿಮ್ಮ ಸ್ವಂತ ಅಭಿವೃದ್ಧಿ ಆಗಿದ್ದೀರಿ. ಮೋದಿಯವ್ರು ರಾಮನಗರಕ್ಕೆ ಕೊಟ್ಟ ಕೊಡುಗೆ ಅಪಾರ ನೀವು ಅದೇ ಜಿಲ್ಲೆಯವರಾಗಿ ನಿಮ್ಮಿಂದ ಏನೂ ಆಗಿಲ್ಲ. ರಾಮನಗರಕ್ಕೆ ಕೊಟ್ಟ ಮೆಡಿಕಲ್ ಕಾಲೇಜು ಕನಕಪುರಕ್ಕೆ ಕದ್ದು ತಗೊಂಡ್ ಹೋದ್ರಿ ಎಂದು ಕಿಡಿಕಾರಿದ್ದಾರೆ.
ಹುಲಿ ಉಗುರು ಪ್ರಕರಣ ಸಂಬಂಧಿಸಿ, ಕಾನೂನು ಎಲ್ಲರಿಗೂ ಒಂದೇ, ಕಾನೂನು ಪ್ರಕಾರವೇ ಕ್ರಮ ವಹಿಸಲಿ. ವನ್ಯ ಪ್ರಾಣಿಗಳ ಉತ್ಪನ್ನಗಳನ್ನು, ಅಂಗಗಳನ್ನು ಬಳಕೆ ಮಾಡಬಾರದು. ಕಾನೂನಿನ ಉದ್ದೇಶವನ್ನು ಧರ್ಮಾತೀತವಾಗಿ ಸರ್ಕಾರ ಈಡೇರಿಸಲಿ ಈಗ ಎಲ್ಲರಲ್ಲೂ ಜಾಗೃತಿ, ಎಚ್ಚರಿಕೆ ಬಂದಿದೆ. ಸಿಎಂ ಸಹ ನವಿಲುಗರಿಯಿಂದ ಸ್ಪರ್ಶಿಸಿಕೊಂಡಿದ್ದಾರೆ ಸಿಎಂ ಆದವರಿಗೆ ಅದರ ಅರಿವು ಇರಲಿಲ್ವಾ? ಎಂದು ವಾಗ್ದಾಳಿ ನಡೆಸಿದ್ದಾರೆ.