ಬೆಂಗಳೂರು : ಹುಲಿ ಉರುರಿನ ಪೆಂಡೆಂಟ್ ಧರಿಸಿದ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೆ ಸ್ಯಾಂಡಲ್ವುಡ್ ನಟರು, ರಾಜಕೀಯ ನಾಯಕರು, ಸ್ವಾಮೀಜಿಗಳು, ಸೇರಿದಂತೆ ಹಲವರು ಧರಿಸಿರುವ ಫೋಟೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ವಿವಾದಕ್ಕೆ ಕಾರಣವಾಗುತ್ತಿದೆ ಈ ವಿಚಾರವಾಗಿ ಮಾಜಿ ಶಾಸಕ ಎಂಪಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಮಲೆನಾಡು ಭಾಗದವನು. ಅದರಲ್ಲೂ ಪಶ್ಚಿಮ ಘಟ್ಟದ ಎಲ್ಲಾ ಮನೆಯಲ್ಲೂ ಹುಲಿ ಉಗುರು ಪ್ರಾಣಿಗಳ ಚರ್ಮ ಕೊಂಬು ಇರೋದು ಸಾಮಾನ್ಯವಾಗಿದೆ. ಈ ವಿಚಾರವನ್ನು ಬೇರೆ ರೀತಿಯಲ್ಲಿ ವಿಲನ್ ಮಾಡೊಕೆ ಹೊರಟಿರೋದು ತಪ್ಪು. ಮಾನವ ಆದಿಕಾಲದಿಂದಲೂ ಬೇಟೆಯಾಗಿಯೇ ಬದುಕು ಸಾಗಿಸುತ್ತಿದ್ದ , ಕಳೆದ 25 ವರ್ಷಗಳಿಂದ ಯಾವುದೆ ಶಿಕಾರಿ ಮಾಡ್ತಿಲ್ಲ ಕಾನೂನು ಪ್ರಕಾರ ನಡೆದುಕೊಳ್ಳಲಾಗ್ತಿದೆ ಆದರೂ ಪ್ರಾಣಿಗಳ ಯಾವುದಾದ್ರು ಒಂದು ವಸ್ತು ಹಳೆಯ ಮನೆಯಲ್ಲಿ ಇರಬಹುದು ಶಿಕಾರಿ ಮಾಡಿ ತಂದಿದ್ದಾರೆ ಅಂತಾ ಬಿಂಬಿಸಬಾರದು. ಫಾರೆಸ್ಟ್ ಅಧಿಕಾರಗಳ ಮನೆಯಲ್ಲೂ ಇದೆಲ್ಲಾ ಇರುತ್ತದೆ. ಇದನ್ನೆಲ್ಲ ಅನ್ಯತೆ ಭಾವಿಸದೆ ಇಲ್ಲಿಗೆ ಕೂಸ್ಟ್ ಮಾಡುವುದು ಸೂಕ್ತ ಎಂದಿದ್ದಾರೆ.
ಈ ವಿವಾದ ಬೆಳಕಿಗೆ ಬರುತ್ತಿದ್ದಂತೆ ಮಲೆನಾಡು ಜನತೆ ಭಯಭೀತರಾಗಿದ್ದಾರೆ ಎಲ್ಲೊ ಹುಲಿಗಳು ಕಾದಾಡಿ ಬಿದ್ದಿರೋದನ್ನ ತಂದಿರ್ತಾರೆ, ಭೇಟಿಯಾಡಿ ಸಾಯಿಸಿ ಅದನ್ನ ತಂದಿರೊಲ್ಲ ಸರ್ಕಾರ ಈ ಬಗ್ಗೆ ವಾರ್ನಿಂಗ್ ಕೊಟ್ಟು ಸಮಸ್ಯೆ ಬಗೆಹರಿಸಬೇಕು. ದರ್ಶನ್ , ನಿಖಿಲ್ ಕುಮಾರಸ್ವಾಮಿ, ಸ್ವಾಮಿಜಿ ಇವರ್ಯಾರು ಕಾಡಿಗೆ ಹೋಗಿ ತಂದಿಲ್ಲಾ ಪೊಲೀಸರರು ಅರೆಸ್ಟ್ ಮಾಡಿರೋದು ತಪ್ಪು. ಸುಮಾರು 30/40 ವರ್ಷದ ಹಿಂದೆ ತಂದು ಇಟ್ಟುಕೊಂಡಿರೋದು ಕಾಡಿಗೆ ಹೋಗಿ ತಂದಿರೋದಲ್ಲಾ ಈ ವಿವಾದನ್ನಿ ಇಲ್ಲಿದೆ ಅಂತ್ಯ ಮಾಡಬೇಕು ಮನವಿ ಮಾಡಿದ್ದಾರೆ.