ಬೆಂಗಳೂರು : ಹುಬ್ಬಳ್ಳಿಯಲ್ಲಿನ 31 ವರ್ಷದ ಹಳೆಯ ಕೇಸನ್ನು ರೀ ಓಪನ್ ಮಾಡಿ ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಅವರನ್ನಯ ಏಕಾಎಕಿ ಬಂಧಿಸೋದು ತಪ್ಪು , ನೋಟಿಸ್ ನೀಡಬೇಕಿತ್ತು ಎಂದು ಶಾಸಕ ಗೋಪಾಲಯ್ಯ ಕಿಡಿಕಾರಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆಗೆ ವಿಶ್ವವೇ ಎದುರು ನೋಡ್ತಿದೆ ನಾವೆಲ್ಲ ರು ಅದನ್ನ ಸ್ವಾಗತಿಸಬೇಕು. ಏನಾದ್ರು ಕೇಸ್ ಇದ್ರೆ ನೋಟಿಸ್ ಕೊಡಬೇಕು ಏಕಾಎಕಿ ಬಂಧಿಸೋದು ತಪ್ಪು. ರಾಮನಿಗಾಗಿ ತ್ಯಾಗ ಮಾಡಿದವರನ್ನ ಬಂಧಿಸಿರೋದು ಹೇಡಿತನ.
ಬಂಧನವನ್ನು ಬಿಜೆಪಿ ಕಾರ್ಯಕರ್ತರು ಖಂಡಿಸುತ್ತಿದ್ದಾರೆ. ಮೋದಿ ಅಧಿಕಾರಕ್ಕೆ ಬಂದಿರೊದಕ್ಕೆ ರಾಮಮಂದಿರವಾಗಿದೆ. ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸುತ್ತೇವೆ ಅದಕ್ಕೆ ತಕ್ಕ ಪಾಠವನ್ನ ರಾಜ್ಯ ಸರ್ಕಾರಕ್ಕೆ ಜನ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.