ಬೆಂಗಳೂರು : ಗಣರಾಜ್ಯೋತ್ಸವದ ಪರೇಡ್ಗಾಗಿ ಕಳುಹಿಸಲಾಗಿದ್ದ ಕರ್ನಾಟಕದ ನಾಲ್ಕು ಟ್ಯಾಬ್ಲೋಗಳನ್ನು ಕಾಂಗ್ರೆಸ್ ಕಡೆಗಣನೆ ವಿಚಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಈ ನಾಡಿನ ನೆಲ ಜಲದ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿಯಿಲ್ಲ. ಕರ್ನಾಟಕದ ಟ್ಯಾಬ್ಲೋ ಬಗ್ಗೆ ರಾಜ್ಯ ಸರ್ಕಾರ ರಾಜಕಾರಣ ಮಾಡೋದು ಸರಿಯಲ್ಲ ಎಂದಿದ್ದಾರೆ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಕುರಿತ ಹೇಳಿಕೆಗೆ ಮೊದಲು ಸಿಎಂ ಉತ್ತರ ಕೊಡಲಿ. ಕರ್ನಾಟಕದ ಟ್ಯಾಬ್ಲೋಗಳ ವಿಚಾರದಲ್ಲಿ ಕೇಂದ್ರಕ್ಕೆ ದುರುದ್ದೇಶ ಇಲ್ಲ. ಕರ್ನಾಟಕ, ಗೋವಾ ಸೇರಿ ಕೆಲವು ರಾಜ್ಯಗಳಿಗೆ ಅವಕಾಶ ಸಿಕ್ಕಿಲ್ಲ. ಇದಕ್ಕೆ ಕಾರಣ ಬೇರೆ ರಾಜ್ಯಗಳಿಗೆ ಅವಕಾಶ ಸಿಗಲಿ ಅಂತ ಅಷ್ಟೇ. ಸಿಎಂ ಬರ, ರೈತರ ಬಗ್ಗೆ ಮೊಸಳೆ ಕಣ್ಣೀರು ಮಾತ್ರ ಹಾಕ್ತಿದ್ದಾರೆ. ನಿಜವಾದ ಕಾಳಜಿ ಅವರಿಗೆ ಇಲ್ಲ ಎಲ್ಲ ವಿಚಾರಗಳಲ್ಲೂ ರಾಜ್ಯ ಸರ್ಕಾರ ರಾಜಕಾರಣ ಮಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.