ಬೆಂಗಳೂರು : ಇನ್ನೂ ವಿಪಕ್ಷ ನಾಯಕ ಯಾರು ಅನ್ನೋದು ಡಿಸೈಡ್ ಆಗಿಲ್ಲ.ಹಾಗಾಗಿ ನಾನು ಕೂಡಾ ಬಿಜೆಪಿ ಹೈಕಮಾಂಡ್ ನಾಯಕರಿಗೆ ಮನವಿ ಮಾಡ್ತೀನಿ ನಾಯಕನನ್ನ ಕೂಡಲೇ ಆಯ್ಕೆ ಮಾಡಿ ಅಂತಾ ಮನವಿ ಮಾಡ್ತೀನಿ ಅಂತಾ ಜೆಡಿಎಸ್ ನಾಯಕ ಕುಮಾರಸ್ವಾಮಿ ಹೇಳಿದ್ದಾರೆ.
ಸದನದಲ್ಲಿ ಬಿಜೆಪಿ ಮುಜುಗರಕ್ಕೆ ಒಳಗಾಗೋದು ಬೇಡ, ಹಾಗಂತಾ ನಾನು ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿಯಲ್ಲ. ಕೆಲವು ಮಾಧ್ಯಮಗಳಲ್ಲಿ ನಾನು ಆಕಾಂಕ್ಷಿ ಎಂದು ಬಿಂಬಿಸಲಾಗುತ್ತಿದೆ. ನಾನು ಯಾವುದೇ ಸ್ಥಾನ ಮಾನಕ್ಕೆ ಕಾಯುತ್ತ ಕೂರುವವನಲ್ಲ. ಕೂರುವ ಜಾಯಮಾನವೂ ನನ್ನದಲ್ಲ ಎಂದು ನೇರವಾಗಿ ಕಠೋರವಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಎರಡೂ ವಿರೋಧ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿರುವ ಹೆಚ್‌ಡಿಕೆ ಮುಂದಿನ ಲೋಕ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೈತ್ರಿಯ ಸಂಬಂಧದ ಗುಟ್ಟು ಬಿಟ್ಟುಕೊಡದೇ ಸದ್ಯದ ರಾಜಕಾರಣದ ಸ್ಥಿತಿಯನ್ನಷ್ಟೆ ವಿವರಿಸಿದರು.
ಇಂದು ರೈತರ ಆತ್ಮಹತ್ಯೆ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ. ಮಹಾನ್ ನಾಯಕರನ್ನ ಕರೆಸಿ ದೇಶಕ್ಕೆ ಸಂದೇಶ ಕೊಡ್ತಾರಂತೆ, ಯಾವ ಸಂದೇಶ ಕೊಡ್ತಾರೆ ನೋಡೋಣಾ, ಇನ್ನು ನಾನೇನು ಮಹಾಘಟ್ ಬಂಧನ್ ಸಭೆಗೆ ಅರ್ಜಿ ಹಾಕಿದ್ನಾ? ಅವರಿಗೆ ಯಾರಬೇಕೊ ಅವರನ್ನ ಕರೆದಿದ್ದಾರೆ ಎಂದು ಹೆಚ್‌ಡಿಕೆ ತಿಳಿಸಿದರು.
ಅಧಿಕಾರದಲ್ಲಿ ಯಾವುದು ಶಾಶ್ವತ ಅಲ್ಲ. ಯಾರೂ ಪರ್ಮನೆಂಟ್ ಆಗಿ ಇರೋಕೂ ಆಗಲ್ಲ. ಕೆಲವೊಂದು ಸನ್ನಿವೇಶಗಳಲ್ಲಿ ರಾಜಕೀಯ ಅನಿವಾರ್ಯ,ನಿತೀಶ್ ಕುಮಾರ್ ಉದಾಹರಣೆ ಗೊತ್ತಲ್ವಾ.? ನಿತೀಶ್ ಕುಮಾರ್ ಸಿದ್ಧಾಂತ ಯಾವುದು.? ನಿತೀಶ್ ಕುಮಾರ್ ಎಷ್ಟು ಪಕ್ಷದ ಜೊತೆ ಹೋದ್ರು.? ಬಿಜೆಪಿ ಜೊತೆ ಒಮ್ಮೆ ಹೋದೆ, ಅದಕ್ಕೆ ಬಿಜೆಪಿ ಬಿ ಟೀಮ್ ಅಂತಾರೆ, ಹಾಗಾದ್ರೆ ನಿತೀಶ್ ಕುಮಾರ್ ಯಾವ ಟೀಮ್.? ಅಂತಾ ಹೆಚ್‌ಡಿಕೆ ಪ್ರಶ್ನಿಸಿದರು..
ನಾವು ಕಳೆದ ಎರಡು ಮೂರು ಬಾರಿಯಿಂದ ಎರಡು, ಮೂರು ಸ್ಥಾನ ಗೆಲ್ಲುತ್ತಾ ಬಂದಿದ್ದೇವೆ, ನಮ್ಮ ಶಕ್ತಿ ಅಷ್ಟೇ ನಾವು ಸ್ವತಂತ್ರವಾಗಿ ಹೋಗಬೇಕಾ, ಹೇಗೆ ಅನ್ನೋದು ಸಂದರ್ಭ ಬಂದಾಗ ಹೇಳ್ತೀನಿ ಅನ್ನೋ ಶಾಕ್ ಅನ್ನು ಹೆಚ್‌ಡಿಕೆ ನೀಡಿದ್ರು.