ಬೆಂಗಳೂರು : ಕರಾವಳಿಯ ಜನಪ್ರಿಯ ಕ್ರೀಡೆ ಇದೀಗಾ ಬೆಂಗಳೂರಿನಲ್ಲಿ ನವೆಂಬರ್ 25,26ರಂದು ನಡೆಸಲು ಎಲ್ಲಾ ರೀತಿಯ ಸಿದ್ದತೆಗಳು ನಡೆಯುತ್ತಿದ್ದು, ಈಗಾಗಲೇ ಕಂಬಳದ ಕರೆ ಕೆಲಸ ಪೂರ್ಣವಾಗಿದೆ.
ಇಂದು ಸ್ಪೀಕರ್ ಯು.ಟಿ.ಖಾದರ್ ಕಂಬಳ ಕರೆಯ ವೀಕ್ಷಣೆ ಮಾಡಿದರು. ಇನ್ನೂ.. ಈ ವೇಳೆ ಎಲ್ಲಾ ಪೊಲೀಸ್ ಹಾಗೂ ಟ್ರಾಫಿಕ್ ಪೊಲೀಸರ ಜೊತೆ ಬಂದೋಬಸ್ತ್ ಬಗ್ಗೆ ಚರ್ಚಿಸಲಾಯಿತು.
ಈವೇಳೆ ಪುತ್ತೂರು ಎಂಎಲ್ಎ ಅಶೋಕ್ ಕುಮಾರ್ ರೈ, ಗುಣರಂಜನ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಸುಂದರ್ ರಾಜ್ ರೈ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಈ ಬಗ್ಗೆ ಮಾತನಾಡಿದ ಸ್ಪೀಕರ್ ಯುಟಿ ಖಾದರ್ ಕಂಬಳ ಬೆಂಗಳೂರಿನಲ್ಲಿನಡೆಯುತಿರುವುದು ಸಂತೋಷದ ವಿಚಾರ. ಈಗಾಗಲೇ ಕಂಬಳಕ್ಕೆ ಎಲ್ಲಾ ರೀತಿಯ ಸಿದ್ದತೆಗಳು ನಡೆದಿದೆ.
ಕಂಬಳ ಯುವ ಜನರಿಗೆ ಪರಿಚಯವಾಗಬೇಕು. ಕೇವಲ ಕಂಬಳ ಮಾತ್ರವಲ್ಲದೇ ಕರಾವಳಿಯ ಕಲೆಗಳು ಹಾಗೂ ಊಟದ ಪದ್ದತಿಯ ಅನಾವರಣವಾಗಲಿದ್ದು, ಎಲ್ಲರೂ ಕಂಬಳದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದರು