ಬೆಂಗಳೂರು : ಕನ್ನಡ ಕಡ್ಡಾಯ ನಾಮಫಲಕಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ ವಿಚಾರವಾಗಿ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ (Former Home Minister Araga Jnanendra) ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕರ್ನಾಟಕದಲ್ಲಿ ಇದ್ದ ಎಲ್ಲರೂ ಕೂಡ ಕನ್ನಡ ಬಳಕೆ ಮಾಡಬೇಕು. ನಿಮ್ಮದು ಯಾವ ಶಾಪ್ ಅಂತ ಕನ್ನಡದಲ್ಲಿ ಹಾಕಬೇಕು. ಕನ್ನಡಿಗರು ಓದಲು ಒಂದು ದೊಡ್ಡ ಬೋರ್ಡ್ ಹಾಕಬೇಕು. ಯಾರೋ ಹೋರಾಟ ಮಾಡಿ ಕಿತ್ತಾಕ್ಕೋ ಮೊದಲು, ನೀವೇ ಹಾಕಿ. ಅದು ಕಾನೂನು ಕಟ್ಟಲೆ ಏನು ಮಾಡ್ತಾರೆ ಗೊತ್ತಿಲ್ಲ. ಕರ್ನಾಟಕದಲ್ಲಿ ಇಂಗ್ಲಿಷ್, ಹಿಂದಿ ಯಾವುದೇ ಬೋರ್ಡ್ ಹಾಕಿ, ಕನ್ನಡ ಬೋರ್ಡ್ ದೊಡ್ಡದಾಗಿರಲಿ ಎಂದಿದ್ದಾರೆ.
ಯತ್ನಾಳ್ ಆರೋಪಕ್ಕೆ ನಾನು ಬಹಿರಂಗವಾಗಿ ಹೇಳಿಕೆ ನೀಡಲ್ಲ. ಎಲ್ಲಿ ಅಭಿಪ್ರಾಯ ತಿಳಿಸಬೇಕೋ, ಅಲ್ಲಿ ತಿಳಿಸ್ತೇನೆ. ನನಗೆ ವೈಯುಕ್ತಿಕವಾಗಿ ನೋವಾಗಿದೆ. ಬಹಿರಂಗವಾಗಿ ಸ್ಟೇಸ್ಮೆಂಟ್ ನೀಡೋದು ಸರಿಯಲ್ಲ. ಪಕ್ಷ ಕಟ್ಟಲು ನಾವು ಎಷ್ಟು ಕಷ್ಟ ಪಟ್ಟಿದ್ದೇವೆ ನಮಗೆ ಗೊತ್ತಿದೆ. ಯತ್ನಾಳ್ ಈ ರೀತಿ ಮಾಡೋದು ಸರಿಯಲ್ಲ. ಯತ್ನಾಳ್ ವಿರುದ್ಧಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.