Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ʻಕೆಂಪು ಸುಂದರಿʼಯನ್ನ ಕದ್ದ ಖತರ್ನಾಕ್‌ ಕಳ್ಳರು ..!

ಗದಗ : ಜಿಲ್ಲೆಯಲ್ಲಿ ಕೆಂಪು ಸುಂದರಿ ಅಂದ್ರೆ ಬ್ಯಾಡಗಿ ಮೆಣಸಿನಕಾಯಿ ಭರ್ಜರಿಯಾಗಿ ಬೆಲೆ ಏರಿಕೆಯಾಗಿದ್ದೆ ತಡ, ಖತರ್ನಾಕ್‌ ಕಳ್ಳರು ಹಾವಳಿ ಹೆಚ್ಚಾಗಿದೆ.

ಬ್ಯಾಡಗಿ ಮೆಣಸಿನಕಾಯಿ ಬೇಡಿಕೆ ಹೆಚ್ಚಾದಂತೆ ರೈತರು ಕಷ್ಟ ಪಟ್ಟು ಬೆಳೆಸಿದ್ದಾರೆ. ಕಷ್ಟ ಪಟ್ಟು ಬೆಳೆಸಿದ ಕೆಂಪು ಸುಂದರಿಯನ್ನು ರಾತ್ರೋರಾತ್ರಿ ಎಸ್ಕೇಪ್ ಮಾಡುವ ಕಳ್ಳರ ಗ್ಯಾಂಗ್ ಇದೀಗ ಗದಗ ಜಿಲ್ಲೆಯಲ್ಲಿ ಬೀಡು ಬಿಟ್ಟಿದೆ.

ಗದಗ ಜಿಲ್ಲೆಯಲ್ಲಿ 2 ವರ್ಷಗಳಿಂದ ಅತಿಯಾದ ಮಳೆಗೆ ಬೆಳೆ ಹಾನಿಯಾಗಿತ್ತು. ಈ ವರ್ಷ ಭೀಕರ ಬರಕ್ಕೆ ಬೆಳೆ ಹಾನಿಗೊಂಡಿದ್ದು ರೈತರ ಜೀವ ಹಿಂಡಿದೆ. ಗದಗತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೇ ಬೆಳೆಗಳಿಗೆ ನೀರುಣಿಸಿ ಕಷ್ಟಪಟ್ಟು ಬೆಳೆದ ಮೆಣಸಿನಕಾಯಿ ಉಳಿಸಿಕೊಳ್ಳಲು ರೈತರು ಸರ್ಕಸ್ ಮಾಡುವಂತಾಗಿದೆ. ಅದರಲ್ಲೂ  ಒಂದೆಡೆ ಕೆಂಪು ಸುಂದರಿ ಬೆಲೆ ಗಗನ ಕುಸುಮವಾಗಿದ್ರೆ ,ತಿಂಗಳಲ್ಲಿ ಕ್ವಿಂಟಾಲ್  40-50 ಸಾವಿರ ರೂಪಾಯಿ ಇದೆ. ತಿಂಗಳಲ್ಲಿ  60-70 ಸಾವಿರ ಕ್ವಿಂಟಾಲ್ ಗೆ ಆಗುವ ಸಾಧ್ಯತೆ ಇದೆ. ಹೀಗಾಗಿ ಮೆಣಸಿನಕಾಯಿ ಜಮೀನುಗಳಿಗೆ ಕಳ್ಳರು ರಾತ್ರೋರಾತ್ರಿ ಬಂದು ಕಟಾವು ಮಾಡಿಕೊಂಡು ಕದ್ದು ಕೊಂಡು ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.

ನಾಲ್ಕು ದಿನಗಳ ಹಿಂದೆ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಮೆಣಸಿನಕಾಯಿ ಕಳ್ಳತನ ಮಾಡುವ ಇಬ್ಬರು ಕಳ್ಳರು ರೆಡ್ ಹ್ಯಾಂಡ್ ಸಿಕ್ಕಾಕಿಕೊಂಡಿದ್ರು. ಆಗ ಕಳ್ಳರ ಹಿಡಿದ ರೈತರು ಹಿಗ್ಗಾಮುಗ್ಗಾ ಥಳಿಸಿ ಪಾಠ ಕಲಿಸಿದ್ರು ಎಂದು ಸುದ್ದಿ ಈ ಹಿಂದೆಯೇ ಸುದ್ದಿಯಾಗಿತ್ತು. ಇದೀಗ ಬ್ಯಾಡಗಿ ಮೆಣಸಿನಕಾಯಿ ಕಳ್ಳರ ಹಾವಳಿ ಹೆಚ್ಚಾಗಿದಂತೆ ರೈತರಿಗೆ ಕಣ್ಣೀರು ತರಿಸುವಂತಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!