ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್ನಲ್ಲಿ ಓಡಾಡುವ ಮಹಿಳೆಯರ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ ಬಸ್ ಗಳು ಸ್ಟಾಪ್ ನಲ್ಲಿ ನಿಲ್ತಾ ಇಲ್ಲ ಅನ್ನುವ ದೂರು ಪದೇ ಪದೇ ಕೇಳಿ ಬರ್ತಾ ಇವೆ. ಇನ್ನು ಬಿಎಂಟಿಸಿಯಲ್ಲೂ ಕೂಡ ಇಂತಹ ದೂರುಗಳು ಕೇಳಿ ಬಂದಿದ್ದವು. ಆದರೆ ಕೆಎಸ್ಆರ್ ಟಿಸಿ ಬಸ್ ಸ್ಟಾಪ್ ಇದ್ರೂ ಕೂಡ ಬಸ್ ನಿಲ್ಲಿಸ್ತೀಲ್ಲ ಅನ್ನೋ ದೂರು ಪ್ರಯಾಣಿಕರಿಂದ ಕೇಳಿ ಬರ್ತಾ ಇದೆ. ಇದಕ್ಕೆ ಸಾಕ್ಷಿ ಬೆಂಗಳೂರಿನ ನವರಂಗ ಮುಂದೆ ಇರೋ ಬಸ್ಟಾಪ್ ಅಷ್ಟಕ್ಕೂ ಅಲ್ಲಿನ ಸಮಸ್ಯೆ ಏನು.? ಇಲ್ಲಿದೆ ನೋಡಿ.
ಹಾಸನ ಮತ್ತು ತುಮಕೂರು ಮಾರ್ಗವಾಗಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಗಳು ಮೆಜೆಸ್ಟಿಕ್ ಇಂದ ಹೊರಟರೆ ನಿಲುಗಡೆ ಕೊಡದೆ ನವರಂಗ ಸ್ಟಾಪ್ನಲ್ಲಿ. ಆದರೆ ಇಲ್ಲಿ ಬಸ್ಗಳು ಬಂದರೂ ಪ್ರಯಾಣಿಕರು ಗಂಟೆ ಕಾಯಬೇಕು, ಏಕೆಂದರೆ ಬಸ್ಸುಗಳು ಬಂದ್ರೂ ಕೂಡ ಇಲ್ಲಿ ನಿಲ್ಸುವುದಿಲ್ಲ. ಬಸ್ ಗಳು ಬಂದ್ರೆ ಸಾಕು ಜನ ಹಿಂದೆ ಓಡೋಡಿ ಓಡೋಡಿ ಹೋಗಿ ಬಸ್ ನಿಲ್ಲಿಸಿದ ಸ್ಥಳದಲ್ಲಿ ಬಸ್ಸುಗಳನ್ನು ಹತ್ಕೊಂಡು ಹೋಗು ಪರಿಸ್ಥಿತಿ ಎದುರಾಗಿದೆ. ಇದು ಇವತ್ತು ಮಾತ್ರವಲ್ಲಾ ಪ್ರತಿದಿನ ನವರಂಗ್ ಸಿಗ್ನಲ್ ನಲ್ಲಿ ನೀವು ನೋಡ್ಲಿಕ್ಕೆ ಸಿಗೋ ದೃಶ್ಯ ಇದು. ಇದಕ್ಕೆಲ್ಲ ಕಾರಣ ಏನಪ್ಪಾ ಅಂದ್ರೆ ನವರಂಗ್ ಬಸ್ ಸ್ಟಾಪ್ ನಲ್ಲಿಸದೆ ಕೆಲವ್ರು ಸಿಗ್ನಲ್ ನಲ್ಲಿ ನಿಲ್ಲಿಸ್ತಾರೆ ನಿಲ್ಲಿಸಿದರೆ. ಇದರಿಂದ ಪ್ರಯಾಣಿಕರು ಯಾವ ಜಾಗದಲ್ಲಿ ಹೋಗಿ ಬಸ್ ಹತ್ತುಬೇಕು ಅನ್ನೋದು ಗೊತ್ತಾಗ್ದೆ ಗೊಂದಲಕ್ಕೆ ಒಳಗಾಗ್ತಾ ಆಗ್ತಾ ಇದ್ದಾರೆ. ಇನ್ನು ಸೀಟ್ ಇದ್ರೂ ಬಸ್ ನಿಲ್ಸಲ್ಲ ಕಾದು ಕಾದು ಸುಸ್ತಾಗುತ್ತೆ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.
ಈ ರೀತಿಯ ಸರಿಯಾಗಿ ಬಸ್ ನಿಲ್ದೆ ಇರೋದಕ್ಕೆ ಪೊಲೀಸರು ಕೂಡ ಕಾರಣ ಆಗಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಾ ಇದೆ, ಸಿಗ್ನಲ್ ಆದ್ಮೇಲೆ ಬಸ್ ನಿಲ್ಸಿದ್ರೆ ಟ್ರಾಫಿಕ್ ಆಗುತ್ತೆ ಅನ್ನೋ ಕಾರಣಕ್ಕೆ, ಹಾಗೂ ಇಲ್ಲಿ ಬಸ್ ನಿಲ್ದಾಣ ಇಲ್ಲ ಅನ್ನೋ ಮಾಹಿತಿ ಇಲ್ಲದೆ ಇರೋ ಕಾರಣಕ್ಕು ಕೂಡ ಸಮಸ್ಯೆ ಆಗ್ತಾ ಇದೆ ಈ ಹಿಂದೆಯೂ ಕೂಡ ಸಿಗ್ನಲ್ ಬಸ್ ಗಳು ಇಲ್ಲಿ ನಿಲ್ತಾಇದ್ದವು, ಹೀಗಾಗಿ ಕಾದು ಕಾದು ಸಿಗ್ನಲ್ ಅಲ್ಲಿಯೇ ನಿಂತು ಹೈರಾಣ ಆಗಿ ಜನ ಬಸ್ ಹತ್ತಿಕೊಂಡು ಹೋಗ್ತಾ ಇದ್ದಾರೆ.
ಒಟ್ನಲ್ಲಿ ಇಲ್ಲಿ ಆಗ್ತಿರುವ ಸಮಸ್ಯೆಯನ್ನು ಕೆಎಸ್ಆರ್ಟಿಸಿ ಹಾಗೂ ಪೊಲೀಸರು ಸಮಸ್ಯೆ ಬಗೆಹರಿಸಬೇಕಿದೆ. ಮತ್ತು ಬಸ್ ನಿಲ್ದಾಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು, ಕೊನೆ ಪಕ್ಷ ಬಸ್ ನಿಲ್ದಾಣ ಎಲ್ಲಿದೆ ಅನ್ನೋದು ನಾಮಪಲಕ ಹಾಕಿ ಜನರಲ್ಲಿ ತಿಳುವಳಿಕೆ ಮೂಡಿಸಬೇಕಾಗಿದೆ…
ವರದಿ : ಮಂಜುನಾಥ್