ಬೆಳಗಾವಿ : ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಮ್ ಎನ್ನುವರವ ಮೇಲೆ ಪೊಲೀಸರು ಹಲ್ಲೆ ಖಂಡಿಸಿ ಇಂದು ಬೆಳಗಾವಿಯ ಚೆನ್ನಮ್ಮ ವೃತ್ತಕ್ಕೆ ಬಂದು ಮಾನವ ಸರಪಳಿ ನಿರ್ಮಿಸಿ ವಕೀಲರ ಪ್ರತಿಭಟನೆ ನಡೆಸಿದ್ದಾರೆ
ಚಳಿಗಾಲದ ಅಧಿವೇಶನ ಶುರುವಾಗಿರುವಾಗಲೇ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಚೆನ್ನಮ್ಮ ವೃತ್ತಕ್ಕೆ ಬಂದು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮುಂದಾಗಿದ್ದಾರೆ.
ಈ ವೇಳೆ ಪ್ರತಿಭಟನೆಯಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಜೀಪ್ ಸಿಕ್ಕಾಕಿಕೊಂಡಿದ್ದು, ಆ ಸಂದರ್ಭದಲ್ಲಿ ಜೀಪ್ ಗೆ ಮುತ್ತಿಗೆ ಹಾಗಿ ವಕೀಲರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಅಲ್ಲದೇ ಚಿಕ್ಕೋಡಿ ಎಸಿ ಜೊತೆ ಕೆಲಕಾಲ ವಾಗ್ವಾದ ನಡೆಸಿದ್ದು,ನಾವು ಪ್ರತಿಭಟನೆ ಮಾಡ್ತಿದ್ದೀವಿ, ಯಾವುದೇ ಕಾರಣಕ್ಕೂ ಮುಂದೆ ತೆರಳಲು ಬಿಡೋದಿಲ್ಲ ಎಂದು ವಕೀಲರು ಪಟ್ಟು ಹಿಡಿದಿದ್ದಾರೆ.