ತುಮಕೂರು : ಸಿದ್ದಗಂಗಾ ಮಠಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿ ನೀಡಿ, ಸಿದ್ದಲಿಂಗ ಶ್ರೀ ಗಳ ಆಶೀರ್ವಾದವನ್ನ ಪಡೆದುಕೊಂಡಿದ್ದಾರೆ. ಶಿವಕುಮಾರ್ ಶ್ರೀಗಳ ಗದ್ದಿಗೆ ದರ್ಶನವನ್ನು ಪಡೆದಿದ್ದಾರೆ.
ಬಳಿಕ ಮಾಧ್ಯಮದೊಂದಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಅತಿಥಿ ಉಪನ್ಯಾಸಕರ ಬೆಂಗಳೂರಿಗೆ ಪಾದಯಾತ್ರೆ ನ್ಯಾಯಯುತವಾಗಿದೆ. ಸರ್ಕಾರ ಗಮನಹರಿಸಿ ಬೇಡಿಕೆ ಈಡೆರಿಸಬೇಕು. ಸಿಎಂ ಸಿದ್ದರಾಮಯ್ಯರಿಗೂ ಈ ಬಗ್ಗೆ ತಿಳಿಸಲಾಗುವುದು. ಅತಿಥಿ ಉಪನ್ಯಾಸಕರ ಬೇಡಿಕೆ ಸರ್ಕಾರ ಈಡೆರಿಸಬೇಕೆಂದು ಒತ್ತಾಯಿಸಿದ್ದಾರೆ.