ಆನೇಕಲ್: ಹುಸ್ಕೂರು ರಸ್ತೆಯಲ್ಲಿ ತೆರಳುತ್ತಿದ್ದ ಕಾರು ಚಾಲಕನಿಗೆ ಚಿರತೆ ಪ್ರತ್ಯಕ್ಷವಾಗಿ ಮೊಬೈಲ್ನಲ್ಲಿ ರ ಫೋಟೋ ಕ್ಲಿಕ್ಕಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಲದಲ್ಲಿ ವೈರಲ್ ಆಗಿದೆ.
ಬೆಂಗಳೂರು ಅಂಗಳದ ಆನೇಕಲ್ ತಾಲೂಕಿನ ಹುಸ್ಕೂರು ಮದ್ದೂರಮ್ಮ ದೇವಾಲಯದ ಹಿಂಬದಿ ರಸ್ತೆಯಲ್ಲಿ ಇಂದುಮುಂಜಾನೆ ನಸುಕಿನ 4ಗಂಟೆಯ ಸುಮಾರಿಗೆ ಕಾರು ಚಾಲಕನಕಣ್ಣಿಗೆ ಚಿರತೆ ಕಂಡು ಬಂದಿದೆ. ಕೂಡಲೇ ಮೋಬೈಲ್ನಲ್ಲಿ ಫೋಟೋ ಸೆರೆ ಹಿಡಿದು ಬೆಳಗ್ಗೆ ಆಗುವಷ್ಟರಲ್ಲಿ ವೈರಲ್ ಆಗಿದೆ. ಕೂಡಲೇ ಎಚ್ಚೆತ್ತುಕೊಂಡ ಆನೇಕಲ್ ರೆಗ್ಯಲರ್ ವಲಯ ಅರಣ್ಯಾಧಿಕಾರಿಗಳು ಬೋನಿನೊಂದಿಗೆ ಬಯಲಿಗಿಳಿದಿದ್ದಾರೆ.
ಕಳೆದ ವಾರವಷ್ಟೇ ಚಿರತೆಯೊಂದು ಕೋಳಿಯನ್ನು ಭೇಟೆಯಾಡಿ ತಿಂದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ಚಿರತೆ ಓಡಾಟಕ್ಕೂ ಈಗಿನಚಿರತೆ ಓಡಾಟಕ್ಕೂ ನೂರು ಮೀಟರ್ ಅಂತರವಷ್ಟೇ ಇದ್ದು. ಇದೇ ಚಿರತೆಯೇ ಇರಬಹುದು ಎಂದು ಸಹಜವಾಗಿ ಅಂದಾಜಿಸಲಾಗಿದೆ.
ಚಿರತೆ ಕಂಡ ಪ್ರದೇಶದಲ್ಲಿ 400 ಎಕರೆಯಷ್ಟು ಸಿಲ್ಕ ಫಾರ್ಂ ಇದ್ದು ಚಿರತೆ ಚಲನ ವಲನಕ್ಕೆ ಅನುಕೂಲ ಒದಗಿಸಿದೆ. ಅಲ್ಲದೆ ಬೆಂಗಳೂರು ಪೂರ್ವ ವಲಯದಲ್ಲಿನ ಚಿರತೆ ಆನೇಕಲ್ ವಲಯಕ್ಕೆ ಬಂದಿರಬಹುದು ಎಂದು ಹೆಸರೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಚಿರತೆ ಒಂದೆಡೆ ನಿಲ್ಲದೆ ಮೂವ್ಮೆಂಟ್ನಲ್ಲಿರುವುದರಿಂದ ಸಹಜವಾಗಿ ಗ್ರಾಮಗಳಲ್ಲಿ ತನ್ನಿಷ್ಟದ ನಾಯಿಗಳ ಭೇಟೆಗೆ ರಾತ್ರಿ ವೇಳೆ ದಾಳಿಯಿಡುತ್ತದೆ. ಒಮ್ಮೊಮ್ಮೆ ದನಗಳೊಂದಿಗೆ ಮಲಗಿ ಬೆಳಗ್ಗಿನಜಾವ ಹೊರನಡೆದಿರುವುದೂ ಇದೆ. ಹೀಗಾಗಿ ಚಿರತೆ ಈ ವರೆಗೆ ಯಾರಿಗೂ ಉಪಟಳ ನೀಡದೆ ಸತ್ತ ಕೋಳಿ-ನಾಯಿಗಳನ್ನಷ್ಟೇ ಆರಿಸಿ ಹೊರಡುತ್ತದೆ ಎಂದು ಹಿರೀಕರೊಬ್ಬರು ತಿಳಿಸುತ್ತಾರೆ.
ಇತ್ತೀಚೆಗೆ ಮನೆ ಗುಡಿ ಕಟ್ಟಡ ಅಂಗಡಿಗಳಿಗೆ ಅಳವಡಿಸಿರುವ ಸಿಸಿ ಕ್ಯಾಮೆರಾ ವಾಹನ ಸವಾರರ ಬಳಿಯಿರುವ ಕ್ಯಾಮೆರಾ ಮೊಬೈಲ್ಗಳಿಂದ ಚಿರತೆ ಇರುವು ಸಾಕ್ಷೀಕರಿಸುತ್ತಿದೆ. ಅದಲ್ಲದೆ ಚಿರತೆಗಾಗಿ ಅರಣ್ಯಾಧಿಕಾರಿಗಳು ಈಗಾಗಲೇ ಒಂದು ಬೋನನ್ನಿಡಲಾಗಿದೆ, ಆದರೆ ಆ ಬೋನಿನ ಸುತ್ತಲೇ ಗಿರಕಿ ಹೊಡೆಯುತ್ತಿರುವ ಚಿರತೆ ಚಾಲಾಕಿಯಾಗಿ ಸುತ್ತಲೂ ಸುಳಿಯುತ್ತಿದೆ. ಮುಂಜಾನೆ ಕಾಣಿಸಿರುವ ಚಿರತೆಗಾಗಿ ಮತ್ತೊಂದು ಬೋನನ್ನಿಡಲು ಅರಣ್ಯಾಧಿಕಾರಿಗಳು ತೆರಳಿದ್ದಾರೆ.