ಬೆಂಗಳೂರು : ಲಿಂಗಾಯತ ನಾಯಕರಿಗೆ ಸಿದ್ದರಾಮಯ್ಯ ಸರ್ಕಾರ ಅನ್ಯಾಯ ಮಾಡಿದೆ ಎಂಬುವುದನ್ನ ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರವಾಗಿ ವಿಧಾನ ಸೌಧದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಬಂದು ನಾಲ್ಕು ತಿಂಗಳು ಆಯಿತು. ಹಲವಾರು ಗ್ಯಾರಂಟಿ ಯೋಜನೆ ಆಗಿವೆ. ಪ್ರಾರಂಭದಲ್ಲಿ ಸಚಿವರು ಶಾಸಕರ ಜೊತೆ ಸಮನ್ವಯತೆ ಕಡಿಮೆ ಆಗಿದೆ ಎಂದು ಹೇಳಿದ್ವಿ. ಅದಕ್ಕೆ ಸಿಎಂ ಅವರೇ ಮುತುವರ್ಜಿ ವಹಿಸಿಕೊಂಡು ಸಮಸ್ಯೆ ಪರಿಹರಿಸಿದ್ದಾರೆ.ಶಾಸಕರ ಹಲವಾರು ಕಾಮಗಾರಿಗಳು ನಡೆಯುತ್ತಿವೆ ಅದು ಸ್ವಾಗತ ಮಾಡುತ್ತೇವೆ.
ಶಾಮನೂರು ಅವರು ಒಂದು ಹೇಳಿಕೆ ನೀಡಿದ್ದಾರೆ.ಲಿಂಗಾಯತ ಅಧಿಕಾರಿಗಳಿ ಸ್ಥಾನ ಮಾನ ಇಲ್ಲಾ ಎಂದು ಹೇಳಿದ್ದಾರೆ. ಜಾತಿ ಆಧಾರದ ಮೇಲೆ ಪೊಸ್ಟಿಂಗ್ ಕೊಡಲು ಆಗುವುದಿಲ್ಲ.ಜಾತಿ ಆಧಾರದ ಮೇಲೆ ಮಂತ್ರಿ ಮಂಡಲ ಮಾಡುತ್ತಾರೆ. ಸಿದ್ದರಾಮಯ್ಯ ಅವರು ಆ ರೀತಿ ಮಾಡಿದ್ದಾರೆ. ಸಾಮಾಜಿಕ ನ್ಯಾಯ ಇರಲಿ ಎಂದು ಈ ರೀತಿ ಮಾಡುತ್ತಾರೆ. ಸಿಎಂ ಹೇಳಿದ್ದಾರೆ 7 ಜನಕ್ಕೆ ಮಂತ್ರಿಮಂಡಳ ಕೊಟ್ಟಿದ್ದಾರೆ ಎಂದು ಅಷ್ಟು ಜನ ಇದಾರೆ. ಲಿಂಗಾಯತ ನಾಯಕರಿಗೆ ಸಿದ್ದರಾಮಯ್ಯ ಸರ್ಕಾರ ಅನ್ಯಾಯ ಮಾಡಿದೆ ಎಂಬುವುದನ್ನ ನಾನು ಒಪ್ಪಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು ಬಸವ ತತ್ವ ಹೊಂದಿದವರು. ಬಸವಣ್ಣ ಅವರ ಪೊಟೋ ಗಳನ್ನ ಸರ್ಕಾರಿ ಕಚೇರಿಗಳಲ್ಲಿ ಹಾಕುವುದು ಇವರೇ ಮಾಡಿದ್ದು. ಜಾತಿ ಹೆಸರಿನಲ್ಲಿ ಜಗಳ ಹಚ್ಚುವಂತ ಕೆಲಸ ಮಾಡಬಾರದು.
ಒಟ್ಟು ಲಿಂಗಾಯತ ಸಮುದಾಯವರು 7 ಜನ ಎಸ್ ಪಿ ಗಳು ಇದಾರೆ. 3 ಡಿಸಿಗಳು ಇದಾರೆ ಹೀಗೆ ದೊಡ್ಡ ಹುದ್ದೆಗಳಲ್ಲಿ ಲಿಂಗಾಯತ ಅಧಿಕಾರಿಗಳ ಇದಾರೆ. ಶಾಮನೂರು ಅವರ ಹೇಳಿಕೆಯಿಂದ ಆಡಳಿತದ ಮೇಲೆ ದುಷ್ಪರಿಣಾಮ ಬಿರುತ್ತದೆ. ಸರಿಯಾದ ಮಾಹಿತಿ ತೆಗೆದುಕೊಂಡು ಮಾತಾಡಲಿ, ಅವರು ಹೇಳಿಕೆ ಕೊಟ್ಟಿದ್ದು ತಪ್ಪು ಎಂದರು.. ಇನ್ನೂ ಹಿರಿಯನಾಯಕರಿಂದ ಸರ್ಕಾರಕ್ಕೆ ಡ್ಯಾಮೆಜ್ ಆಗುತ್ತಿದೆ ಎಂಬ ವಿಚಾರವಾಗಿ ಮಾತನಾಡಿ ಆತಂಕರಿಕ ಪ್ರಜಾಪ್ರಭುತ್ವ ನಮ್ಮಲ್ಲಿ ಜಾಸ್ತಿ ಇದೆ.
ಮಾತಾಡಿಲಿಕ್ಕೆ ಅವಕಾಶ ಇದೆ. ಅಭಿವೃದ್ಧಿ,ಆಡಳಿತ ವಿಚಾರದಲ್ಲಿ ಮಾಧ್ಯಮಗಳ ಮುಖಾಂತರ ಹೇಳಿದ್ರೆ ನಾಲ್ಕು ಜನಕ್ಕೆ ಗೊತ್ತೆ ಅಂತಾ ನಿಮ್ಮ ಮುಂದೆ ಬರುತ್ತೇವೆ. ಈಂತಹ ಹೇಳಿಕೆಯಿಂದಲೇ ಈಗಾ ಸಚಿವರು ಯಾಕ್ಟಿವ್ ಆದ್ರು ಎಲ್ಲಾ ಸರಿ ಆಗಿದೆ. ಇನ್ನೂ ಸಚಿವರು ಟೈಮ್ ಟೇಬಲ್ ಕೊಡಬೇಕು ನೋಡೊಣ ಮುಂದೆ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ