ಬೆಂಗಳೂರು : ಹೊಸ ವರ್ಷದ ಸಂಭ್ರಮ ದಿನ ಮದ್ಯ ಸೇವನೆ ಮಾಡದವರೇ ಇಲ್ಲ. ಈ ಸಂಭ್ರಮದ ಭರದಲ್ಲಿ ಮದ್ಯ ಕುಡಿದು ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಮದ್ಯ ಪ್ರಿಯರು ನೀಡಿದ್ದಾರೆ.
ಡಿಸೆಂಬರ್ 31ರ ದಿನ ಸರ್ಕಾರಕ್ಕೆ ಬರೊಬ್ಬರಿ 193 ಕೋಟಿ ಆದಾಯ ಹರಿದು ಬಂದಿದೆ ಎಂದು ವರದಿಯಾಗಿದೆ ಅಷ್ಟೇ ಅಲ್ಲದೇ, ವಿವಿದ ಬ್ರ್ಯಾಂಡ್ ಮದ್ಯದ ಉತ್ಪನ್ನಗಳ ಮೇಲಿನ ದರ ಏರಿಕೆಯಾಗಿದ್ದು, ಕ್ವಾಟರ್ ಬೆಲೆಯಲ್ಲಿ 20 ರಿಂದ 30 ರೂಪಾಯಿಗಳಷ್ಟು ಏರಿಕೆಯಾಗಿದೆ. ಮಾಮೂಲಿ ದಿನಗಳಲ್ಲಿ ನಿತ್ಯ 90 ಕೋಟಿ ರೂಪಾಯಿ ಮದ್ಯ ಮಾರಾಟವಾಗುತ್ತಿತ್ತು. ವರ್ಷಾಂತ್ಯದ ಕೊನೆಯ ಎರಡೇ ದಿನಗಳಲ್ಲಿ 417 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ವರದಿಯಾಗಿದೆ
ರಾಜ್ಯಾದ್ಯಂತ ಓಟಿ, ಬಿಪಿ, 8ಪಿಎಂ ಬ್ರ್ಯಾಂಡ್ ದರ ಹೆಚ್ಚಳ ಮಾಡಲಾಗಿದೆ. ಕ್ವಾಟರ್ ಗೆ 20 ರಿಂದ 30 ರೂಪಾಯಿಯಷ್ಟು ಬೆಲೆಯನ್ನು ತೈಲ ಕಂಪನಿಗಳು ಹೆಚ್ಚಳ ಮಾಡಿವೆ. 180ಎಂಎಲ್ ಓಟಿ: 90 ರಿಂದ 111 ರೂಪಾಯಿಗೆ ಏರಿಕೆಯಾಗಿದೆ, 180 ಎಂಎಲ್ ಬಿಪಿ: 110 ರೂ.ನಿಂದ 145 ರೂಪಾಯಿಗೆ ಏರಿಕೆಯಾಗಿದೆ,
*180 ಎಂಎಲ್ 8 ಪಿಎಂ: 90 ರೂ.ಗಳಿಂದ 11 ರೂಪಾಯಿಗೆ ಏರಿಕೆಯಾಗಿದೆ.