ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆಗೆ ಕಾನೂನು ಮಾಡುತ್ತಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಕನ್ನಡ ನಾಮಫಲಕ ಅಳವಡಿಕೆ ವಿಚಾರವಾಗಿ ವಿಕಾಸಸೌಧದಲ್ಲಿ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ನಾರಾಯಣಗೌಡರ ಹೋರಾಟವನ್ನ ಬೆಂಬಲಿಸುತ್ತೇನೆ. ಆದರೆ ಮತ್ತೊಬ್ಬರಿಗೆ ತೊಂದರೆ ಕೊಡುವುದು ಬೇಡ. ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆಗೆ ಕಾನೂನು ಮಾಡುತ್ತಿದ್ದೇವೆ. ಸರೋಜಿನಿ ಮಹಿಷಿ ವರದಿ ಎರಡೂ ಸದನಗಳಲ್ಲಿ ಪಾಸ್ ಆಗಿದೆ.
ಈ ವರಿದಯ ರೂಲ್ಸ್ ಫ್ರೇಮ್ ಮಾಡುತ್ತಿದ್ದೇವೆ. ಜನವರಿ ಮೊದಲ ವಾರದಲ್ಲಿ ಈ ಬಗ್ಗೆ ಅಂತಿಮ ಸಭೆ ಮಾಡುತ್ತೇವೆ. ಬೋರ್ಡ್‌ನ 60% ಕನ್ನಡ ಪದಗಳು ಇರಬೇಕು. ಕನ್ನಡ ನಾಮ ಫಲಕ ಕಡ್ಡಾಯ ಅಳವಡಿಕೆ, ಕನ್ನಡ ಭೋದನೆ ಅನುಷ್ಠಾನಕ್ಕಾಗಿ ಟಾಸ್ಕ್‌ಫೋರ್ಸ್ ಸಮಿತಿ ರಚನೆ ಮಾಡುತ್ತಿದ್ದೇವೆ. ಕನ್ನಡ ಸಂಸ್ಕೃತಿ , ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಒಳಗೊಂಡ ಟಾಸ್ಕ್‌ಫೋರ್ಸ್ ಸಮಿತಿ ರಚನೆಗೆ ಚಿಂತನೆ ನಡೆಸಿದ್ದೇವೆ. ನಾವು ಕಾನೂನು ತಂದ ಬಳಿಕ ಕನ್ನಡ ನಾಮ ಫಲಕ ಹಾಕದಿದ್ರೆ ಅಂಗಡಿ ಪರವಾನಗಿ ರದ್ದು ಮಾಡುತ್ತೇವೆ. ಶಾಲೆಗಳಲ್ಲಿ ಕನ್ನಡ ಭೋದನೆ ಮಾಡದಿದ್ರೆ ದಂಡ ಅಷ್ಟೇ ಅಲ್ಲ ಶಿಕ್ಷಣ ಸಂಸ್ಥೆ ಮಾನ್ಯತೆ ರದ್ದು ಮಾಡುವ ಬಿಗಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಿಎಂ ಡಿಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಸರ್ಕಾರಿ ಕಡತಗಳು ಕನ್ನಡದಲ್ಲೇ ಆರಂಭವಾಗಬೇಕು. ಕನ್ನಡಪರ ಸಂಘಟನೆಗಳು ಹೇಳಿದಂತೆ ಕಾನೂನು ತರ್ತೀವಿ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ