ರಾಯಚೂರು : ಜಿಲ್ಲೆಯ ಮಾನ್ವಿ ಪೋಲಿಸ್ ಠಾಣೆಯ ಎದುರು ಕುಡಿದ ಮತ್ತಿನಲ್ಲಿ ಹೆಂಡತಿ ಬೇಕೆಂದು ವ್ಯಕ್ತಿ ನೊಬ್ಬ ರಂಪಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ರಾಜೋಳ್ಳಿ ಗ್ರಾಮದ ನರಸಿಂಹ ಕಿರಿಕ್ ಮಾಡಿದ ವ್ಯಕ್ತಿ. ಈತ ಕಂಠ ಪೂರ್ತಿ ಕುಡಿದು ರಾಯಚೂರು ಠಾಣೆಯ ಎದುರಿಗೆ ಬಂದು ನನ್ನ ಇಬ್ಬರು ಹೆಂಡತಿಯರು ಬಿಟ್ಟು ಹೋಗಿದ್ದಾರೆ ಅವರು ನನಗೆ ಬೇಕು, ಇಲ್ಲ ಅಂದ್ರೆ ನಾನು ಇಲ್ಲಿಂದ ಹೋಗಲ್ಲ ಎಂದು ಕಿರಿಕ್ ಮಾಡಿದ್ದಾನೆ. ಈ ಘಟನೆ ನಿನ್ನೆ ಮಧ್ಯಾಹ್ನದ ಹೊತ್ತಿಗೆ ಪೊಲೀಸರು ಊಟ ಮಾಡೋಕ್ಕೆ ತೆರಳಬೇಕಾದ ವೇಳೆ ನಡೆದಿದ್ದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ವ್ಯಕ್ತಿ ಹೇಳುತ್ತಿರೋ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ ಎಂದು ಮನವೋಲಿಸಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.