Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಮಂಗಳೂರು- ಗೋವಾ ವಂದೇ ಭಾರತ್ ರೈಲು ಸಂಚಾರ : ವೇಳಾಪಟ್ಟಿಇಲ್ಲಿದೆ

ದಕ್ಷಿಣಕನ್ನಡ : ಕರ್ನಾಟಕದಲ್ಲಿ ನಾಲ್ಕನೇ ವಂದೇ ಭಾರತ್‌ ರೈಲು ಕಾರ್ಯಾರಂಭಗೊಂಡಿದ್ದು, ಮಂಗಳೂರು ಗೋವಾ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಸಿದ್ಧತೆ ಪರಿಶೀಲಿಸಿದರು. ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಅಧಿಕಾರಿಗಳ ಜೊತೆ ನಿಲ್ದಾಣಕ್ಕೆ ತೆರಳಿ ಪರಿಶೀಲನೆ  ನಡೆಸಿದರು

ಮಂಗಳೂರು ಗೋವಾ ವಂದೇ ಭಾರತ್ ಸೂಪರ್ ಫಾಸ್ಟ್ ರೈಲು ಮಂಗಳೂರಿನಿಂದ ಕೇವಲ 4.15 ಗಂಟೆ ಅವಧಿಯಲ್ಲಿ ಗೋವಾ ತಲುಪಲಿದೆ. ಈ ರೈಲು ಗಂಟೆಗೆ 160 ಕಿಮೀ ವೇಗದಲ್ಲಿ ಸಂಚರಿಸಲಿದೆ. ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದ ಆರು ದಿನವೂ ಸಂಚಾರ ಮಾಡಲಿದೆ.

ಮಂಗಳೂರಿನಿಂದ ಬೆಳಗ್ಗೆ 8.30 ಕ್ಕೆ ಹೊರಡುವ ವಂದೇ ಭಾರತ್ ರೈಲು ಮಧ್ಯಾಹ್ನ 1.15 ಕ್ಕೆ ಗೋವಾದ ಮಡಗಾಂವ್ ತಲುಪಲಿದೆ. ಮತ್ತೆ ಸಂಜೆ ಮಡಗಾಂವ್ ನಿಂದ 6.10ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರು ತಲುಪಲಿದೆ.

ಈ ರೈಲಿಗೆ ಉಡುಪಿ ಮತ್ತು ಕಾರವಾರದಲ್ಲಿ ಎರಡು ಕಡೆ ಮಾತ್ರ ನಿಲುಗಡೆ ಇರಲಿದೆ. ಇದು ಎಂಟು ಬೋಗಿಗಳ ಹವಾನಿಯಂತ್ರಿತ ವ್ಯವಸ್ಥೆಯ ರೈಲಾಗಿದ್ದು, ಏರ್ ಲೈನ್ ಮಾದರಿ ಸೀಟುಗಳ ಜೊತೆಗೆ ಎಕ್ಸಿಕ್ಯುಟಿವ್ ಚೇರ್​​ಗಳ ವ್ಯವಸ್ಥೆ ಇದರಲ್ಲಿದೆ. ಆನ್​​ಬೋರ್ಡ್ ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆ ಕೂಡ ರೈಲಿನಲ್ಲಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!