ಬಳ್ಳಾರಿ : ಬಿಜೆಪಿಗೆ ಹೋದ ವಲಸಿಗ ಶಾಸಕರು ನಮ್ಮ ಪಕ್ಷದಲ್ಲಿದ್ದಾಗ ವಜ್ರದಂತೆ ಇದ್ರು. ಆದರೆ, ಅವರು ಬಿಜೆಪಿಗೆ ಹೋದ ಬಳಿಕ ಮೌಲ್ಯ ಕಳೆದುಕೊಂಡಿದ್ದು, ಕೇಸರಿನಲ್ಲಿ ಬಿದ್ದ ಕಲ್ಲುಗಳಂತಾಗಿದ್ದಾರೆ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಬಿ ನಾಗೇಂದ್ರ ಹೇಳಿದ್ದಾರೆ.
ಆಪರೇಷನ್ ಕಮಲದಿಂದಲೇ ಬಿಜೆಪಿಗೆ ಸೋಲು ಎಂಬ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆಗೆ ವಿಚಾರವಾಗಿ ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಮಾತನಾಡಿ, ಕೆ.ಎಸ್. ಈಶ್ವರಪ್ಪನವರು ಪಕ್ಷದಲ್ಲಿ ಒಳಗೆ ಎನ್ ನಡೆಯುತ್ತದೆ ಅನ್ನೋದನ್ನ ಸರಿಯಾಗಿ ಹೇಳಿದ್ದಾರೆ.
ಅಲ್ಲದೇ ವಲಸಿಗ ಶಾಸಕರು ನಮ್ಮ ಪಕ್ಷದಲ್ಲಿದ್ದಾಗ ವಜ್ರದಂತೆ ಇದ್ದರು. ವಲಸಿಗ ಶಾಸಕರು ಕೇಸರಿನಲ್ಲಿ ಬಿದ್ದು ಮೌಲ್ಯ ಕಳೆದುಕೊಂಡರು. ಅವರು ಬಿಜೆಪಿಗೆ ಹೋದ ಮೇಲೆ ಕೆಸರಿನಲ್ಲಿ ಬಿದ್ದು ಕಲ್ಲಿನಂತಾಗಿದ್ದಾರೆ. ಬಿಜೆಪಿಗೆ ಹೋದ ಮೇಲೆ ವಜ್ರದಂತಹ ಮೌಲ್ಯವನ್ನ ಕಳೆದುಕೊಂಡರು. ನಮ್ಮ ಪಕ್ಷದ ಸಿದ್ದಾಂತಗಳನ್ನ ಮೆಚ್ಚಿಕೊಂಡು ತತ್ವ ಸಿದ್ದಾಂತಗಳನ್ನ ಒಪ್ಪಿಕೊಂಡು ಪಕ್ಷಕ್ಕೆ ಬಂದ್ರೆ ಸ್ವಾಗತಿಸುವೆ. ರಾಜ್ಯ ಹಾಗೂ ಕೇಂದ್ರ ನಾಯಕರು ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಅನ್ನೋದನ್ನ ತೀರ್ಮಾನ ಮಾಡುತ್ತಾರೆ. ಎಂದು ಹೇಳಿದ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಾವೂ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆಗಳನ್ನ ಈಡೇರಿಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಯಾರು ಸ್ಪರ‍್ಧೆ ಮಾಡಬೇಕು ಅನ್ನೋದನ್ನ ಪಕ್ಷದ ನಾಯಕರು ತೀರ್ಮಾನ ಮಾಡಲಿದ್ದಾರೆ ಎಂದಿದ್ದಾರೆ. ನನ್ನ ಸಹೋದರ ವೆಂಕಟೇಶ್ ಪ್ರಸಾದ್ ಸ್ಪರ್ದೆ ಮಾಡಲ್ಲ. ಅವರು ಟಿಕೇಟ್ ಆಕ್ಷಾಂಕಿಯಲ್ಲ, ನಮ್ಮ ಕುಟುಂಬದಿಂದ ಮತ್ತೆ ಯಾರು ಸ್ಪರ್ಧೆ ಮಾಡಲ್ಲ ಎಂದು ಹೇಳಿದರು.